ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ | ಅಪಘಾತ: ತಾ.ಪಂ. ಸದಸ್ಯೆ ಶಾಂತವ್ವ ಸ್ಥಳದಲ್ಲೇ ಸಾವು

Published 13 ಫೆಬ್ರುವರಿ 2024, 14:01 IST
Last Updated 13 ಫೆಬ್ರುವರಿ 2024, 14:01 IST
ಅಕ್ಷರ ಗಾತ್ರ

ನವಲಗುಂದ: ಸಮೀಪದ ಖಣ್ಣೂರ ಶಲವಡಿ ನಡುವೆ ಮೋಟಬಸವೇಶ್ವರ ದೇವಸ್ಥಾನದ ಹತ್ತಿರ ಕ್ರೂಸರ್ ಮತ್ತು ಟ್ರ್ಯಾಕ್ಟರ್ ಮಧ್ಯೆ ಸೋಮವಾರ ರಾತ್ರಿ ನಡೆದ ಅಪಘಾತದಲ್ಲಿ ತಾಲ್ಲೂಕು ಪಂಚಾಯ್ತಿ ಸದಸ್ಯೆ, ತಡಹಾಳ ಗ್ರಾಮದ ಶಾಂತವ್ವ ಬಸವರಾಜ್ ಮಣ್ಣೂರ್ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಕ್ರೂಸರ್ ಚಾಲಕ ನಾಗರಾಜ ಶೇಖಪ್ಪ ತೆಗ್ಗಿನಮನಿ (25) ಅವರಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿಲಾಗಿದೆ.

ಪ್ರಶಾಂತ್ ಸುಭಾಸ್ ಮಣ್ಣೂರ, ರತ್ನವ್ವ ಕೋಂ ಸುಭಾಸ್ ಮಣ್ಣೂರ, ಪಾರವ್ವ ಕೋಂ ಶಿವಾನಂದ ಮಣ್ಣೂರ, ಶಕುಂತಲಾ ತಂದೆ ವೀರಪ್ಪ ಮಣ್ಣೂರ ಅವರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ನವಲಗುಂದ ಪಿಎಸ್ಐ ಜನಾರ್ಧನ್ ಭಟ್ರಳ್ಳಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT