ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಬ್ಬ ಎಂಎಲ್‌ಸಿ ರಾಜೀನಾಮೆ ಶೀಘ್ರ: ಹೊರಟ್ಟಿ

Published 21 ಮಾರ್ಚ್ 2024, 16:20 IST
Last Updated 21 ಮಾರ್ಚ್ 2024, 16:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಾನು ವಿಧಾನ ಪರಿಷತ್‌ ಸಭಾಪತಿಯಾದ ದಿನದಿಂದ ಈವರೆಗೆ 11 ಮಂದಿ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಇದೊಂದು ರೀತಿ ದಾಖಲೆಯಾಗಿದೆ.  ಒಂದೆರಡು ದಿನಗಳಲ್ಲಿ  ಮತ್ತೊಬ್ಬ ಸದಸ್ಯರು ರಾಜೀನಾಮೆ ಸಲ್ಲಿಸುವರು’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

‘ವಿ.ಎಸ್‌. ಉಗ್ರಪ್ಪ (ಕಾಂಗ್ರೆಸ್‌), ಶ್ರೀನಿವಾಸ ಮಾನೆ (ಕಾಂಗ್ರೆಸ್‌), ಸಿ.ಆರ್‌. ಮನೋಹರ್‌ (ಬಿಜೆಪಿ), ಸಿ.ಎಂ. ಇಬ್ರಾಹಿಂ (ಜೆಡಿಎಸ್‌), ಪುಟ್ಟಣ್ಣ (ಬಿಜೆಪಿ), ಬಾಬುರಾವ್‌ ಚಿಂಚನಸೂರ್‌ (ಬಿಜೆಪಿ), ಆರ್‌. ಶಂಕರ್‌ (ಬಿಜೆಪಿ), ಲಕ್ಷ್ಮಣ ಸವದಿ (ಬಿಜೆಪಿ), ಆಯನೂರು ಮಂಜುನಾಥ (ಬಿಜೆಪಿ), ಜಗದೀಶ ಶೆಟ್ಟರ್‌ (ಬಿಜೆಪಿ) ಹಾಗೂ ಮರಿತಿಬ್ಬೇಗೌಡ (ಜೆಡಿಎಸ್‌) ಈವರೆಗೆ ರಾಜೀನಾಮೆ ನೀಡಿದ್ದಾರೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT