ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡದ ಉದ್ಯಾನಗಳಿಗೆ ಚಾಂಪಿಯನ್‌ ಪಟ್ಟ

Published 30 ಜನವರಿ 2024, 16:06 IST
Last Updated 30 ಜನವರಿ 2024, 16:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉದ್ಯಾನಗಳ ಸ್ಪರ್ಧೆಯಲ್ಲಿ ಧಾರವಾಡದ ಆಯುಕ್ತರ ಕಚೇರಿ, ಮೃತ್ಯುಂಜಯ ಉದ್ಯಾನ ಹಾಗೂ ಆಝಾದ್‌ ಪಾರ್ಕ್‌ ಉದ್ಯಾನಕ್ಕೆ ಚಾಂಪಿಯನ್‌ ಬಹುಮಾನ ನೀಡಲಾಗಿದೆ.

ಒಟ್ಟು 42 ಉದ್ಯಾನಗಳು ಸ್ಪರ್ಧೆಯಲ್ಲಿ ಇದ್ದವು. 3 ಚಾಂಪಿಯನ್‌, 9 ಪ್ರಥಮ, 11 ದ್ವಿತೀಯ ಬಹುಮಾನ ನೀಡಲಾಗಿದೆ.

ಪ್ರಥಮ: ನವನಗರ ಮುಖ್ಯ ಉದ್ಯಾನ, ಹುಬ್ಬಳ್ಳಿಯ ಅಧ್ಯಾಪಕನಗರ, ಲಿಂಗರಾಜನಗರ, ಶ್ರೀನಿವಾಸನಗರ, ಆಯುಕ್ತರ ಮುಖ್ಯ ಕಚೇರಿಯ ಎದುರಿನ ಉದ್ಯಾನ, ಆಯುಕ್ತರ ಬಂಗಲೆ ಉದ್ಯಾನ, ಚಿಕ್ಕವೀರಯ್ಯ ಪ್ಲಾಟ್‌, ಧಾರವಾಡದ ರಜತಗಿರಿ, ಕೊಪ್ಪದಕೇರಿ ಶಿವಾಲಯ ಉದ್ಯಾನ.

ದ್ವಿತೀಯ: ಹುಬ್ಬಳ್ಳಿಯ ಬೃಂದಾವನ ಕಾಲೊನಿ, ಮಹಾವೀರ ಕಾಲೊನಿ, ಶೆಟ್ಟರ್‌ ಲೇಔಟ್‌, ಬನಶಂಕರಿ ಬಡಾವಣೆ, ಕುಮಾರ್ ಪಾರ್ಕ್‌, ರೇಣುಕಾನಗರ, ಶ್ರೀರಾಮ ಕಾಲೊನಿ, ಬಾಲಭವನ, ಶಿರೂರ ಪಾರ್ಕ್‌ 1 ನೇ ಹಂತ, ನಾಡಗೌಡ ಬಡಾವಣೆ ಉದ್ಯಾನ.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಉದ್ಯಾನಗಳ ವಿಭಾಗಕ್ಕೆ 1 ಜನರಲ್‌ ಚಾಂಪಿಯನ್‌, ಫಲ–ಪುಷ್ಪ ಪ್ರದರ್ಶನದ ಅಂಗವಾಗಿ  ಹೂ–ಕುಂಡಗಳ ವಿಭಾಗದಲ್ಲಿ 17 ಪ್ರಥಮ, 9 ದ್ವಿತೀಯ ಹಾಗೂ ಫಲ ಪುಷ್ಪ ಪ್ರದರ್ಶನದಲ್ಲಿ ರನ್ನರ್‌ ಅಪ್‌ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT