ಬುಧವಾರ, ಸೆಪ್ಟೆಂಬರ್ 23, 2020
26 °C

ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ: ಮಲೆನಾಡಾದ ಹುಬ್ಬಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದಲ್ಲಿ ಒಂದು ವಾರದಿಂದ ಮೇಲಿಂದ ಮಳೆ‌ಸುರಿಯುತ್ತಿದ್ದು, ಬುಧವಾರ ಬೆಳಗಿನ ಜಾವದಿಂದಲೇ ಮಳೆ ಬರುತ್ತಿದೆ. ಇದರಿಂದ ವಾಣಿಜ್ಯ ನಗರಿಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ.

ಕುಸುಗಲ್, ಅಂಚಟಗೇರಿ ಕ್ರಾಸ್, ಶಿರಗುಪ್ಪಿ, ಬ್ಯಾಹಟ್ಟಿ, ಹೆಬಸೂರು, ಕಿರೇಸೂರು ಸೇರಿದಂತೆ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿಯೂ ಮಳೆ ಸುರಿಯುತ್ತಿದೆ. ಇದರಿಂದ ಜನರ ನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಹುಬ್ಬಳ್ಳಿ ನಗರದಲ್ಲಿ ಮಳೆಯಲ್ಲಿಯೇ ಅನೇಕ ಜನ ಕೆಲಸಕ್ಕೆ ಹೊರಟ ಚಿತ್ರಣ ಕಂಡುಬಂತು. ರೈತರಿಗೆ ಮುಂಗಾರು ಚಟುವಟಿಕೆಗಳನ್ನು ಚುರುಕುಗೊಳಿಸಲು ಮಳೆ ನೆರವಾಯಿತು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಿರುವ ಕಾರಣ ನಗರದಲ್ಲಿ ಅನೇಕ ಹಿಂದೂಪರ ಸಂಘಟನೆಗಳು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಸಿಹಿ ವಿತರಿಸಲು ಸಿದ್ದತೆ ಮಾಡಿಕೊಂಡಿವೆ. ರಾಯರ ಆರಾಧನೆಯ ಎರಡನೇ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕೆಲ ಜನ ಸಿದ್ದರಾಗಿದ್ದರು. ಈ ಕಾರ್ಯಗಳಿಗೂ ಮಳೆ ಅಡ್ಡಿಯಾಯಿತು.


ಹುಬ್ಬಳ್ಳಿಯಲ್ಲಿ ಸತತ ಮಳೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು