ಸಿಬಿಟಿ– ದೇವಾಂಗ ಪೇಟೆ ಮಧ್ಯೆ ಬಸ್‌ ಸೇವೆ ಸ್ಥಗಿತ–ಬಸ್ ತಡೆದು ಸ್ಥಳೀಯರ ಪ್ರತಿಭಟನೆ

7
ಸಂಚರಿಸುತ್ತಿದ್ದ ಮೂರರ ಪೈಕಿ ಒಂದು ಬಸ್‌ ಸೇವೆ ಸ್ಥಗಿತ

ಸಿಬಿಟಿ– ದೇವಾಂಗ ಪೇಟೆ ಮಧ್ಯೆ ಬಸ್‌ ಸೇವೆ ಸ್ಥಗಿತ–ಬಸ್ ತಡೆದು ಸ್ಥಳೀಯರ ಪ್ರತಿಭಟನೆ

Published:
Updated:
Deccan Herald

ಹುಬ್ಬಳ್ಳಿ: ದೇವಾಂಗ ಪೇಟೆಗೆ ಸಂಚರಿಸುತ್ತಿದ್ದ ನಗರ ಸಾರಿಗೆಯ ಒಂದು ಬಸ್‌ ಸೇವೆಯನ್ನು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಸ್ಥಳೀಯರು ಬಸ್ ಅಡ್ಡಗಟ್ಟಿ ಭಾನುವಾರ ಪ್ರತಿಭಟನೆ ನಡೆಸಿದರು.

ತಮಟೆ ಭಾರಿಸಿದ ಪ್ರತಿಭಟನಾಕಾರರು ಸಾರಿಗೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸಿಬಿಟಿ– ದೇವಾಂಗಪೇಟೆಯ ಎರಡು ನಗರ ಸಾರಿಗೆ ಬಸ್‌ಗಳನ್ನು ಸುಮಾರು ನಾಲ್ಕು ಗಂಟೆಗಳ ಕಾಲ ತಡೆದರು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರ ಮನವೊಲಿಸಿದ ನಂತರ ಬಸ್‌ಗಳನ್ನು ಬಿಟ್ಟರು.

ಸಿಬಿಟಿಯಿಂದ ದೇವಾಂಗ ಪೇಟೆಯ ಕೊನೆಯ ಬಸ್ ನಿಲ್ದಾಣಕ್ಕೆ ಪ್ರತಿ ದಿನ ಮೂರು ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಎರಡು ತಿಂಗಳಿನಿಂದ ಒಂದು ಬಸ್ಸನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನಾ ಆಗಿಲ್ಲ ಎಂದು ಶಿವಕುಮಾರ 'ಪ್ರಜಾವಾಣಿ' ಗೆ ತಿಳಿಸಿದರು.

ದೇವಾಂಗ ಪೇಟೆಗೆ ಇರುವುದೇ ಮೂರು ಬಸ್‌ಗಳು ಪ್ರತಿ 20 ನಿಮಿಷಕ್ಕೊಮ್ಮೆ ಅವು ಬರುತ್ತಿದ್ದವು. ಒಂದು ಬಸ್ ನಿಲ್ಲಿಸಿದ ಕಾರಣ ಈಗ ಬಸ್‌ಗಾಗಿ ಒಂದು ಗಂಟೆ ಕಾಯಬೇಕಾಗಿದೆ. ಏಕೆ ಹೀಗೆ ಎಂದು ವಾಯವ್ಯ ಸಾರಿಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಜಾತ್ರೆಗಳಿಗೆ ಒಪ್ಪಂದದ ಮೇರೆಗೆ ಬಸ್ ಕಳುಹಿಸಿದ್ದ ಪರಿಣಾಮ ಒಂದು ಬಸ್ ಸೇವೆ ಬಂದ್ ಮಾಡಿರುವುದಾಗಿ ಹೇಳಿದರು. ಎರಡು ತಿಂಗಳ ಕಾಲ ನಡೆಯುವ ಜಾತ್ರೆ ಯಾವುದು ಎಂದು ಸ್ಥಳೀಯ ನಾರಾಯಣ್ ಪ್ರಶ್ನಿಸಿದರು.

ಈ ಭಾಗದಿಂದ ಪ್ರತಿ ದಿನ 300 ವಿದ್ಯಾರ್ಥಿಗಳು ನಗರದ ವಿವಿಧ ಶಾಲಾ– ಕಾಲೇಜುಗಳಿಗೆ ಬಸ್ಸಿನಲ್ಲಿ ಹೋಗುತ್ತಾರೆ. ಅವರೆಲ್ಲರೂ ಪಾಸ್ ಸಹ ಪಡೆದುಕೊಂಡಿದ್ದಾರೆ. ಬಸ್‌ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಪ್ರತಿ ದಿನ ₹70 ಖರ್ಚು ಮಾಡಿ ಆಟೊದಲ್ಲಿ ಪ್ರಯಾಣಿಸಬೇಕಾಗಿದೆ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !