ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಬೆಟಗೇರಿ | ಹಣ ವಂಚನೆ: ಪ್ರಕರಣ ದಾಖಲು

Published 19 ಡಿಸೆಂಬರ್ 2023, 16:13 IST
Last Updated 19 ಡಿಸೆಂಬರ್ 2023, 16:13 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಗ್ರಾಮದ ಬಸಪ್ಪ ವಿಜಾಪೂರ ಅವರ ಬ್ಯಾಂಕ್ ಉಳಿತಾಯ ಖಾತೆಯಲ್ಲಿದ್ದ ₹9,500 ಹಣವನ್ನು ಆನ್‌ಲೈನ್‌ ಮೂಲಕ ವಂಚಕರು ವರ್ಗಾಯಿಸಿಕೊಂಡಿರುವ ಮತ್ತೊಂದು ಘಟನೆ ನಡೆದಿದೆ.

ಉಪ್ಪಿನಬೆಟಗೇರಿ ಕೆವಿಜಿ ಬ್ಯಾಂಕ್‌ಗೆ ಮಂಗಳವಾರ ಗ್ರಾಹಕ ಬಸಪ್ಪ ಮತ್ತು ಅವರ ಮಗ ಅಶೋಕ ವಿಜಾಪೂರ ಸಮೇತ ಗ್ರಾಮಸ್ಥರು ತೆರಳಿ ಬ್ಯಾಂಕ್ ಮ್ಯಾನೇಜರ್ ಎಸ್.ಡಿ. ಜೋಶಿ ಅವರಿಗೆ ಹಣ ವಂಚನೆಯಾಗಿರುವ ಕುರಿತು ಮಾಹಿತಿ ನೀಡಿ, ನಮ್ಮ ಹಣ ಹೋಗಿರುವುದಕ್ಕೆ ಯಾರು ಹೊಣೆ ಎಂದು ತರಾಟೆಗೆ ತೆಗೆದುಕೊಂಡರು. 

ಕೆ.ವಿ.ಜಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಡಿ.ಜೋಶಿ ಮಾತನಾಡಿ, ‘ಕಲ್ಲೂರ, ಹನುಮನಾಳ, ಉಪ್ಪಿನಬೆಟಗೇರಿ ಸೇರಿ ಒಟ್ಟು ಮೂರು ಜನ ಗ್ರಾಹಕರ ಹಣವನ್ನು ವರ್ಗಾಯಿಸಿಕೊಂಡಿರುವ ಘಟನೆ ನಡೆದಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು. 

ಧಾರವಾಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT