ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಸ್ವಾಧೀನಪಡಿಸಿಕೊಂಡ ಜಾಗ ಅತಿಕ್ರಮಣ: ಪಾಲಿಕೆಯಿಂದ ತೆರವು ಕಾರ್ಯಾಚರಣೆ

Published 14 ಅಕ್ಟೋಬರ್ 2023, 5:12 IST
Last Updated 14 ಅಕ್ಟೋಬರ್ 2023, 5:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಂಡಿದ್ದ ಜಾಗದ ಅತಿಕ್ರಮಣ ತೆರವು ಕಾರ್ಯಾಚರಣೆ ಹು–ಧಾ ಮಹಾನಗರ ಪಾಲಿಕೆಯಿಂದ ಶುಕ್ರವಾರ ನಡೆಯಿತು.

ಉಣಕಲ್ ಕ್ರಾಸ್‌ನಿಂದ ಸಾಯಿನಗರ ಸರ್ಕಲ್ ಮತ್ತು ಉಣಕಲ್ ಚರ್ಚ್‌ವರೆಗೆ 18 ಮೀ. ರಸ್ತೆ ವಿಸ್ತರಣೆಗಾಗಿ ಈವರೆಗೆ 55 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಮಾಲೀಕರಿಗೆ ₹3.20 ಕೋಟಿ ಪರಿಹಾರ ನೀಡಲಾಗಿದೆ. ಆದರೂ, ಕೆಲವರು ಕಟ್ಟಡ, ಅಂಗಡಿ, ಕಾಂಪೌಂಡ್‌ ತೆರವುಗೊಳಿಸಿರಲಿಲ್ಲ. ಪಾಲಿಕೆ ವಲಯ ಕಚೇರಿ–5ರ ಸಿಬ್ಬಂದಿ, ಪೊಲೀಸರ ನೆರವಿನೊಂದಿಗೆ ಜೆಸಿಬಿ ಮೂಲಕ ಇವುಗಳನ್ನು ತೆರವುಗೊಳಿಸಲಾಯಿತು. 

ಒಟ್ಟು 3,985.75 ಚ.ಮೀ. ವ್ಯಾಪ್ತಿಯ 160 ಆಸ್ತಿಗಳ ಭೂಸ್ವಾಧೀನಕ್ಕೆ ಪಟ್ಟಿ ಮಾಡಲಾಗಿದ್ದು, ₹9.37 ಕೋಟಿ ಪರಿಹಾರಧನ ನೀಡಲು ಅಂದಾಜಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.

ಪಾಲಿಕೆ ವಲಯ–5ರ ಅಭಿವೃದ್ದಿ ಅಧಿಕಾರಿ ಶರಣ ಬಸಪ್ಪ ಕೆಂಭಾವಿ, ವಲಯ ಆಯುಕ್ತ ಗಿರೀಶ ತಳವಾರ, ಎಂಜಿನಿಯರ್‌ ರಾಥೋಡ, ಅಭಿಷೇಕ, ಮಂಜುನಾಥ, ಕಂದಾಯ ನಿರೀಕ್ಷಕ ಪಮಾಡಿ, ರವಿ, ಈಶ್ವರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT