ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಹೋಳಿ ಹಬ್ಬ; ವಿವಿಧ ಕಾರ್ಯಕ್ರಮ ಮಾರ್ಚ್‌ 25ರಿಂದ

Published 23 ಮಾರ್ಚ್ 2024, 15:29 IST
Last Updated 23 ಮಾರ್ಚ್ 2024, 15:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಮರಿಪೇಟೆ ಫ್ರೆಂಡ್ಸ್ ಸರ್ಕಲ್ ವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್‌ 25ರಿಂದ 28ರವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಕಾಶಿನಾಥ ಖೋಡೆ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ 20 ವರ್ಷಗಳಿಂದ ಫ್ರೆಂಡ್ಸ್ ಸರ್ಕಲ್ ವತಿಯಿಂದ ಹೋಳಿ ಹಬ್ಬ ಆಚರಿಸಲಾಗುತ್ತಿದೆ. ಇಲ್ಲಿನ ಕಾಮಣ್ಣ, ರತಿಯರು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ. ಸರ್ವಧರ್ಮದವರು ಈ ಕಾರ್ಯಕ್ರದಲ್ಲಿ ಭಾಗಹಿಸುತ್ತಾರೆ’ ಎಂದು ಹೇಳಿದರು.

‘ಮಾರ್ಚ್‌ 25ರಂದು ಕಾಮಣ್ಣ ರತಿದೇವಿ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಮಾರ್ಚ್‌ 26ರಂದು ಮೆಹಂದಿ, ರಂಗೋಲಿ ಸ್ಪರ್ಧೆ ನಡೆಯಲಿದೆ’ ಎಂದರು.

‘ಮಾರ್ಚ್‌ 27ರಂದು ಭರತನಾಟ್ಯ, ನೃತ್ಯ ಸ್ಪರ್ಧೆ, ಸಂಗೀತ ಸ್ಪರ್ಧೆ, ಸಾವಜಿ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ. ಮಾರ್ಚ್‌ 28ರಂದು ಬಾ ಹುಬ್ಬಳ್ಳಿ ಬಾಹುಬಲಿ ಸಾವಜಿ ಹಾಸ್ಯ ನಾಟಕ, ಸಮೂಹ ನೃತ್ಯ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

‘ಮಾರ್ಚ್‌ 29ರಂದು ಬೆಳಿಗ್ಗೆ 7 ಕ್ಕೆ ಕಾಮಣ್ಣ, ರತಿದೇವಿಯರ ಮೆರವಣಿಗೆ ಮೂಲಕ ರಂಗ ಪಂಚಮಿ ಆಚರಿಸಲಾಗುವುದು. ಮೆರವಣಿಗೆಯಲ್ಲಿ ಕಮರಿಪೇಟ ಪಂಚ ಕಮಿಟಿ ಸರ್ವ ಸದಸ್ಯರು, ಯುವಕರು, ಮಹಿಳೆಯರು ಭಾಗವಹಿಸಲಿದ್ದಾರೆ ಎಂದರು.

ಕಮರಿಪೇಟೆ ಫ್ರೆಂಡ್ಸ್‌ ಸರ್ಕಲ್‌ನ ಉಪಾಧ್ಯಕ್ಷ ರಮೇಶ ಮಗಜಿಕೊಂಡಿ, ಮಂಜುನಾಥ ಮಿಸಕಿನ್, ಅಜಯ ಕಲಬುರಗಿ, ನಾಗರಾಜ ಕಾಟಿಘರ, ಪ್ರತಿಕ ಹಬಿಬ್ ಇದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT