ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಸಾಯನಿಕ ಮುಕ್ತ ಆಹಾರ ಸೇವನೆ ಅಗತ್ಯ’

ಹೊನ್ನಾಪೂರ: ಸಾವಯವ ಕೃಷಿ ಉತ್ಪನ್ನ ಮಾರಾಟ ಕೇಂದ್ರ ಆರಂಭ
Published 18 ಜನವರಿ 2024, 15:45 IST
Last Updated 18 ಜನವರಿ 2024, 15:45 IST
ಅಕ್ಷರ ಗಾತ್ರ

ಅಳ್ನಾವರ: ಕೃಷಿಯಲ್ಲಿ ರಾಸಾಯನಿಕ ಬಳಕೆ ನಿಲ್ಲಿಸುವ ಮೂಲಕ ಹಾಳಾಗುತ್ತಿರುವ ಭೂಮಿಯ ಫಲವತ್ತತೆಯನ್ನು ಸಂರಕ್ಷಿಸಿಕೊಳ್ಳಲು ಪ್ರತಿಯೊಬ್ಬ ರೈತರು ಮುಂದಾಗಬೇಕು. ಸ್ಥಳಿಯವಾಗಿ ದೊರೆಯುವ ಪೋಷಕಾಂಶಯುಳ್ಳ ವಸ್ತುಗಳಿಂದ ಗೊಬ್ಬರ ತಯಾರಿಸಿ ಹೊಲದಲ್ಲಿ ಬಳಕೆ ಮಾಡಿ ಎಂದು ಧಾರವಾಡ ಬಿ.ಡಿ.ಎಸ್.ಎಸ್ ಸಂಸ್ಥೆಯ ನಿರ್ದೇಶಕ
ಫಾ.ಪೀಟರ್‌ ಅಭಿಪ್ರಾಯಟ್ಟರು.

ತಾಲ್ಲೂಕಿನ ಹೊನ್ನಾಪುರ ಗ್ರಾಮದಲ್ಲಿ ಬಿಡಿಎಸ್‌ಎಸ್ ಸಂಸ್ಥೆಯ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಸಾವಯವ ಕೃಷಿಯಿಂದ ಬೆಳೆಯಲಾದ ತರಕಾರಿ ಬೆಳೆಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬೇಡಿಕೆಗೆ ತಕ್ಕಂತೆ ಆಹಾರ ಉತ್ಪನ್ನಗಳನ್ನು ಬೆಳೆಯಲು ಮುಂದಾಗಿ ಎಂದರು.

ವ್ಯಾಪಾರೀಕರಣದ ದೃಷ್ಟಿ ಹಾಗೂ ಹೆಚ್ಚಿನ ಆದಾಯದ ನಿರೀಕ್ಷೆಯಿಂದ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಇದು ಮಾನವನ ಬದುಕಿನ ಮೇಲೆ ತೀವ್ರ ತರವಾದ ಪರಿಣಾಮ ಬೀರುತ್ತಿದೆ. ಇಂತಹ ಆಹಾರ ಬಳಿಕೆಯಿಂದ ಹಲವಾರು ಕಾಯಿಲೆಗಳಿಗೆ ಜನ ತುತ್ತಾಗುತ್ತಿದ್ದಾರೆ. ಜೊತೆಗೆ ಪರಿಸರದ ಮೇಲೆಯೂ ಪರಿಣಾಮ ಬಿರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹ ರಾಸಾಯನಿಕ ಮುಕ್ತ ಆಹಾರ ಸೇವನೆಯ ಕಡೆಗೆ ಗಮನ ನೀಡಬೇಕು ಎಂದರು.

ಗ್ರಾಮದಲ್ಲಿ ಸುಮಾರು 150 ರೈತರು ಸಾವಯವ ಕೃಷಿಯಲ್ಲಿ ತೊಡಗಿದ್ದು ವಿವಿದ ಉತ್ಪನ್ನಗಳನ್ನು ಬೆಳೆಯುತ್ತಿದ್ದಾರೆ. ಸ್ಥಳೀಯವಾಗಿ ಉತ್ಪಾದಿಸಿದ ಬೆಳೆಗಳನ್ನು ವಾರಕ್ಕೊಮ್ಮೆ ಗ್ರಾಮದಲ್ಲಿ ಮಾರಾಟ ಮಾಡುವ ವ್ಯವಸ್ಥೆ ರೂಡಿಸಿಕೊಳ್ಳಲಾಗಿದೆ. ಇದರಿಂದ ಸ್ಥಳೀಯ ಜನರಿಗೆ ರಾಸಾಯನಿಕ ರಹಿತ ತರಕಾರಿ ಮತ್ತು ಇತರೆ ಉತ್ಪನ್ನಗಳನ್ನು ಸುಲಭವಾಗಿ ಸಿಗುತ್ತವೆ ಎಂದು ಗ್ರಾಮದ ಪ್ರಗತಿ ಪರ ರೈತ ಪರಪ್ಪ ನಾಯಕ ಹೇಳಿದರು.

ಹಿರಿಯರಾದ ರಮೇಶ ಹೂಗಾರ ಅವರ ವಾಣಿಜ್ಯ ಮಳಿಗೆಯಲ್ಲಿ ಸಾವಯವ ಉತ್ಪನ್ನಗಳನ್ನು ಮಾರಾಟ ಕೇಂದ್ರ ತೆರೆಯಲಾಗಿದೆ. ಸದ್ಯ ವಾರಕ್ಕೊಮ್ಮೆ ನಡೆಯುವ ಮಾರಾಟ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ನಿತ್ಯವೂ ವಸ್ತುಗಳು ಸಿಗುವಂತೆ ಕಾಯಂ ಮಾರಾಟ ಕೇಂದ್ರ ತೆರೆಯುವದಾಗಿ ರೈತರು ಹೇಳಿದರು.

ಬಿಡಿಎಸ್‌ಎಸ್ ಸಂಸ್ಥೆಯ ಉಜ್ಜೀವನ ಯೋಜನೆ ಸಂಯೋಜಕ ಎ.ಬಿ.ಪಠಾಣ, ಗ್ರಾಮ ಪಂಚಾಯ್ತಿ ಸದಸ್ಯೆ ಬಾಳವ್ವ ಹೂಗಾರ, ಕಾರ್ಯಕರ್ತೆಯರಾದ ಶೈಲಾ ಹಿರೇಮಠ, ಶಾಂತಾ ಕಾಳೆ, ಖಾಸೀಂ ಮುಜಾವರ, ರೈತರಾದ ರಾಮಣ್ಣ ನಂದನವಾಡಿ, ನಾಗವ್ವ ಮಾರಿಹಾಳ, ಚಂದ್ರವ್ವ ನಿಂಬಾಳಕರ, ಸುರೇಶ ಹುಲಮನಿ, ಪತ್ರೆಪ್ಪ ಕಲಘಟಗಿ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT