ಗುರುವಾರ , ಆಗಸ್ಟ್ 22, 2019
25 °C

ಶೂಟಿಂಗ್‌: ಹುಬ್ಬಳ್ಳಿ ಶೂಟರ್‌ಗಳಿಗೆ 11 ಪದಕ

Published:
Updated:
Prajavani

ಹುಬ್ಬಳ್ಳಿ: ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ರಾಜ್ಯಮಟ್ಟದ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್ ಅಕಾಡೆಮಿಯ ಸ್ಪರ್ಧಿಗಳು ಒಟ್ಟು 11 ಪದಕಗಳನ್ನು ಜಯಿಸಿದ್ದಾರೆ.

ಓಪನ್‌ ಸೈಟ್ ರೈಫಲ್‌ ತಂಡ ವಿಭಾಗದ ಸ್ಪರ್ಧೆಯಲ್ಲಿ ಜಯಶ್ರೀ ಪಾಟೀಲ, ರೇಷ್ಮಾ ದೇವಮಾನೆ, ಜಾಫರ್‌ ಅರಳಿ, ದಿವ್ಯಾ ಭಾಟಿಯಾ, ಸುಶೋಭನಾ ಜಾಲಿಹಾಳ ಮತ್ತು ಕೀರ್ತಿ ಬಾಳೆಹೊಸೂರ ಅವರನ್ನು ಒಳಗೊಂಡ ತಂಡ ಮೂರು ಕಂಚಿನ ಪದಕಗಳನ್ನು ಗೆದ್ದಿದೆ.

ಪಿಸ್ತೂಲ್‌ ವಿಭಾಗದಲ್ಲಿ ಜಯಕುಮಾರ್, ಸೈಯದ್‌ ಅಲಿ ಕಳಸಾಪುರ, ಕಿರಣ ಪೂಜಾರ, ಬಸವಕಿರಣ ಇಡ್ಲಿ, ನರಸಿಂಹ ರೆಡ್ಡಿ, ಪವರ್ ಶರಣರ್, ರವಿಚಂದ್ರ ಬಾಲೆಹೊಸೂರ, ಪ್ರಜ್ವಲ್‌ ಇಜಾರಿ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ.

ಪೀಪ್‌ ಸೈಟ್‌ ರೈಫಲ್‌ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಐಶ್ವರ್ಯ ಬಾಲೆಹೊಸೂರ ಕಂಚು ಪಡೆದಿದ್ದಾರೆ. ಇದೇ ಸ್ಪರ್ಧೆಯ ಅಂಗವಿಕಲರ ವಿಭಾಗದ ವೈಯಕ್ತಿಕ ಸ್ಪರ್ಧೆಗಳಲ್ಲಿ ಜ್ಯೋತಿ ಸಣ್ಣಕ್ಕಿ, ಶಂಕರಲಿಂಗ ತವಳಿ ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ರಾಕೇಶ ನಿಡಗುಂದಿ ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು

ಪಿಸ್ತೂಲ್‌ ವಿಭಾಗದಲ್ಲಿ 11 ಮತ್ತು ರೈಫಲ್‌ ವಿಭಾಗದಲ್ಲಿ 10 ಶೂಟರ್‌ಗಳು ಇದೇ 24ರಿಂದ ಕೇರಳದ ಇಡುಕ್ಕಿ ಜಿಲ್ಲೆಯ ಮುತ್ತುಮ್‌ನಲ್ಲಿ ನಡೆಯಲಿರುವ ದಕ್ಷಿಣ ವಲಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಂಡಿದ್ದಾರೆ.

Post Comments (+)