ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ

Published 27 ಏಪ್ರಿಲ್ 2024, 16:17 IST
Last Updated 27 ಏಪ್ರಿಲ್ 2024, 16:17 IST
ಅಕ್ಷರ ಗಾತ್ರ

ಕಲಘಟಗಿ: ತಾಲ್ಲೂಕಿನ ಮುತ್ತಗಿ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಮನಸೂರು ರೇವಣಸಿದ್ಧೇಶ್ವರ ಮಠದ ಪೀಠಾಧ್ಯಕ್ಷ ಬಸವರಾಜ ದೇವರು ಕಂಬಳಿ ಬಿಸಿ ಬಂಡಾರ ಹಾರಿಸಿ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿ, ಬೀರೇಶ್ವರರ ಪವಾಡ ಪುರುಷರು ಶಿವನ ಅವತಾರಿ, ಕನಕ ಕಾಳಿದಾಸ, ಬಸವಣ್ಣ, ರೇವಣಸಿದ್ಧೇಶ್ವರ, ಕುರುಬಗೊಲ್ಲಾಳರು ಸೇರಿಕೊಂಡು ಇಂದಿನ ಜನಪದಿಯ ಡೊಳ್ಳು ಹಾಡುಗಾರರಿಗೆ ಸ್ಪೂರ್ತಿಯಾಗಿ ಸಿದ್ದಿ ಪಡೆದು ಸಾಮಾಜಿಕ ಧಾರ್ಮಿಕ ಕ್ರಾಂತಿಗೆ ಮುನ್ನುಡಿ ಬರೆದವರು ಎಂದರು.

ಕಲಾತಂಡಗಳಾದ ಡೊಳ್ಳು, ಕರಡಿ ಮಜಲು, ಕೋಲಾಟ ಸಾಂಪ್ರದಾಯ ಪದಗಳು ಬೀರೇಶ್ವರ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ದೇಗುಲಕ್ಕೆ ಮರುಳಿದ ಮೇಲೆ ಅನ್ನಸಂತರ್ಪಣೆ ಜರುಗಿತು.

ದೇವರಿಗೆ ಬೆಳಿಗ್ಗೆ ಪೂಜೆ, ಅಭಿಷೇಕ ನೆರವೇರಿತು. ನಂತರ ಭಂಡಾರ ಓಕುಳಿ ಆಡುತ್ತಾ ಭಕ್ತ ಸಮೂಹ ಸಂಭ್ರಮ ಪಟ್ಟಿತು. ಗ್ರಾಮದ ಹಿರಿಯರು ಯುವಕರು ಸದ್ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT