ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನ ಪರಿಷತ್‌: ರಾಬರ್ಟ್‌ ದದ್ದಾಪುರಿ ಪರಿಗಣಿಸಲು ಮನವಿ

Published 26 ಮೇ 2024, 15:50 IST
Last Updated 26 ಮೇ 2024, 15:50 IST
ಅಕ್ಷರ ಗಾತ್ರ

ಧಾರವಾಡ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಬರ್ಟ್ ದದ್ದಾಪುರಿ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಪರಿಗಣಿಸಬೇಕು ಎಂದು  ಕಾಂಗ್ರೆಸ್‌ನ ಹುಬ್ಬಳ್ಳಿ-ಧಾರವಾಡ ಮಹಾನಗರ ಘಟಕದ ಕಾರ್ಯದರ್ಶಿ ಆನಂದ ಜಾಧವ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ತಿನ 11 ಸದಸ್ಯರ ಅವಧಿ ಜೂನ್‌ 17ಕ್ಕೆ ಕೊನೆಗೊಳ್ಳಲಿದೆ. ಜಗದೀಶ ಶೆಟ್ಟರ ಅವರ ರಾಜೀನಾಮೆಯಿಂದ ತರೆವಾಗಿರುವ ಸ್ಥಾನ ಭರ್ತಿಯಾಗಬೇಕಿದೆ.  ಉತ್ತರ ಕರ್ನಾಟಕ ಭಾಗದ ಅಲ್ಪಸಂಖ್ಯಾತರ ಕೋಟಾದಲ್ಲಿ ದದ್ದಾಪುರಿ ಅವರನ್ನು ಪರಿಗಣಿಸಬೇಕು ಎಂದು ಕೋರಿದರು. 

ಪ್ಯಾರಾಚೂಟ್‌ ನಾಯಕರಿಗೆ (ತಳಮಟ್ಟದಲ್ಲಿ ಕಾರ್ಯನಿರ್ವಹಿಸದವರು) ಆದ್ಯತೆ ನೀಡಬಾರದು. ಪರಿಷತ್‌ ಸ್ಥಾನವನ್ನು  ಹಿಂದೆ ನೀಡಿದವರಿಗೆ ಪುನರಾವರ್ತನೆ ಮಾಡಬಾರದು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಎಚ್. ಪೂಜಾರ, ಸತೀಶ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT