ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಮೇಶ್ವರ ಮಹಾರಥೋತ್ಸವ ನಾಳೆ

Published 25 ಮೇ 2024, 15:31 IST
Last Updated 25 ಮೇ 2024, 15:31 IST
ಅಕ್ಷರ ಗಾತ್ರ

ನವಲಗುಂದ: ತಾಲ್ಲೂಕಿನ ಶಿರಕೋಳ ಗ್ರಾಮದ ಆರಾಧ್ಯ ದೈವ ಕಲ್ಮೇಶ್ವರ ದೇವರ ಜಾತ್ರೆ ಮೇ 27 ರಿಂದ ಮೇ 31ರವರೆಗೆ ಜರುಗಲಿದೆ.

ಶಿರಕೋಳ ಹಿರೇಮಠದ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ, ನವಲಗುಂದ ಗವಿಮಠದ ಅಭಿನವ ಬಸವಲಿಂಗ ಸ್ವಾಮೀಜಿ, ಶಿರಕೋಳದ ಸಿದ್ಧಾರೂಢಮಠದ ಚಿದಾನಂದ  ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಮೇ 27 ಬೆಳಿಗ್ಗೆ ಜಗದೀಶ ಗುಡ್ಡಾಪುರಮಠ ಅವರಿಂದ ರುದ್ರಾಭಿಷೇಕ ನಡೆಯಲಿದೆ. ಸಂಜೆ 5 ಗಂಟೆಗೆ ಕಲ್ಮೇಶ್ವರ ಮಹಾರಥೋತ್ಸವ ಜರುಗಲಿದೆ.

ಮೇ 28ರಂದು ಬೆಳಿಗ್ಗೆ 8 ಗಂಟೆಗೆ ಕಡುಬಿನ ಕಾಳಗ, ರಾತ್ರಿ 8 ಗಂಟೆಗೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ಪೂಜ್ಯರಿಂದ ಆಶೀರ್ವಚನ ನಡೆಯಲಿವೆ. 

ಮೇ 30ರಂದು ಕಳಸಾರೋಹಣ, ಬೆಳಿಗ್ಗೆ 8 ಗಂಟೆಗೆ ಮೈಲಾರ ದೇವರಿಗೆ ಬೆಳಕು ಹೊರಡಿಸುವ ಕಾರ್ಯಕ್ರಮ, ಮೇ 31ರಂದು ಗ್ರಾಮ ದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT