ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ನ.25, 26ರಂದು ನುಡಿ ಹಬ್ಬ, ಜಾನಪದ ಸಂಭ್ರಮ

Published 23 ನವೆಂಬರ್ 2023, 15:37 IST
Last Updated 23 ನವೆಂಬರ್ 2023, 15:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಕಲಾ ಕೃಷಿ ಬಳಗ ಹಾಗೂ ಬಸವ ಸೇವಾ ಸಮಿತಿ ವತಿಯಿಂದ ಇಲ್ಲಿನ ಲಿಂಗರಾಜ ನಗರ ರಸ್ತೆಯ ಕಾಳಿದಾಸ ನಗರ ಬಸ್‌ಸ್ಟಾಪ್‌ ಬಳಿಯ ಮೈದಾನದಲ್ಲಿ ನ.25 ಮತ್ತು ನ.26ರಂದು ನುಡಿ ಹಬ್ಬ ಮತ್ತು ಜಾನಪದ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬಸವ ಸೇವಾ ಸಮಿತಿ ಅಧ್ಯಕ್ಷ ಪ್ರೊ.ಶಿವಯೋಗಪ್ಪ ಯಮ್ಮಿ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ನ.25ರಂದು ಸಂಜೆ 5.45ಕ್ಕೆ ಕನ್ನಡ ಪ್ರೇಮಿ ಆನಂದ ಕಮತಗಿ ಅವರು ನುಡಿ ಹಬ್ಬ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಕಲಾ ಕೃಷಿ ಬಳಗದ ಅಧ್ಯಕ್ಷ ಕೆ.ಸಿ.ಪಾಟೀಲ ಅಧ್ಯಕ್ಷತೆ ವಹಿಸುವರು. ಹಾಸ್ಯ ಭಾಷಣಕಾರರಾದ ಸುಧಾ ಬರಗೂರು, ಚಿತ್ರನಟ ರಾಮಕೃಷ್ಣ ನೀರನಳ್ಳಿ, ಎಚ್‌.ವಿ.ಬೆಳಗಲಿ ಹಾಗೂ ನುಡಿ ಹಬ್ಬ ಸಂಘಟನಾ ಸಮಿತಿ ಅಧ್ಯಕ್ಷ ಸಿ.ಕ.ಮಾಲಿಪಾಟೀಲ ಭಾಗವಹಿಸುವರು’ ಎಂದು ತಿಳಿಸಿದರು.

ಚಿತ್ರನಟ ಮಂಡ್ಯ ರಮೇಶ ಅವರ ನಿರ್ದೇಶಿಸಿದ ’ಕೃಷ್ಣೇಗೌಡರ ಆನೆ’ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ. ನಂತರ ಜಾನಪದ ಕಲಾವಿದ ರಾಮು ಮೂಲಗಿ, ಪ್ರಾಧ್ಯಾಪಕ ಪ್ರೀತಿ ಸತೀಶ, ಶಾಂತಣ್ಣ ಯ.ಕಡಿವಾಳ ಅವರಿಗೆ ಕನ್ನಡ ಕಲಾ ಕೃಷಿ ಬಳಗದಿಂದ ’ಕನ್ನಡ ರತ್ನ’ ‍ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಇದೇ ವೇಳೆ ಬಸವ ಸೇವಾ ಸಮಿತಿ ವತಿಯಿಂದ ಡಾ.ಅವಿನಾಶ್‌ ಕವಿ, ದಿಲೀಪ್‌ ಶರ್ಮಾ, ಡಾ.ಮುರಳೀಧರ್‌ ದೊಡ್ಡಮನಿ ಅವರಿಗೆ ’ಬಸವಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇವರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಜನ ಸಾಧಕರನ್ನೂ ಸನ್ಮಾನಿಸಲಾಗುವುದು ಎಂದು ಹೇಳಿದರು.

ನ.26ರಂದು (ಭಾನುವಾರ) ಸಂಜೆ 5.45ಕ್ಕೆ ಜಾನಪದ ಸೌರಭ ಕಾರ್ಯಕ್ರಮ ನಡೆಯಲಿದೆ. ಶಿವಯೋಗಪ್ಪ ಯಮ್ಮಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಶಂಭು ಬಳಿಗಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದರು.

ನಂತರ ’ಜೀವಿ ಕಲಾ ಬಳಗ’ ಕಲಾ ತಂಡದವರಿಂದ ‘ಪಂಡಿತ ಪುಟ್ಟರಾಜ ಗವಾಯಿಗಳು’ ಎಂಬ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನುಡಿ ಹಬ್ಬದ ಸಂಘಟನಾ ಸಮಿತಿ ಅಧ್ಯಕ್ಷ ಸಿ.ಕ.ಮಾಲೀಪಾಟೀಲ, ಸಮಿತಿಯ ಪ್ರಮುಖರಾದ ಎಚ್‌.ವ್ಹಿ.ಬೆಳಗಲಿ, ಬಿ.ಎಸ್‌.ಮಾಳವಾಡ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT