ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ, ಮೈಸೂರು ವಿಭಾಗಗಳಿಗೆ ಸಮಗ್ರ ದಕ್ಷತಾ ಪ್ರಶಸ್ತಿ

67ನೇ ರೈಲ್ವೆ ಸಪ್ತಾಹ, ಪಾರಿತೋಷಕ ವಿತರಣೆ
Last Updated 18 ಮೇ 2022, 15:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ಘಟಕಗಳ ಉತ್ತಮ ಕಾರ್ಯಗಳನ್ನು ಗುರುತಿಸಿ, ಗೌರವಿಸಲು ನಗರದ ಗದಗ ರಸ್ತೆಯ ಚಾಲುಕ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಬುಧವಾರ ನೈರುತ್ಯ ರೈಲ್ವೆಯ 67ನೇ ಸಪ್ತಾಹ ಕಾರ್ಯಕ್ರಮ ನಡೆಯಿತು.

2020–21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ವಿಭಾಗಗಳಿಗೆ ದಕ್ಷತಾ ಪಾರಿತೋಷಕ ಪ್ರದಾನ ಮಾಡಲಾಯಿತು.

ಸಮಗ್ರ ದಕ್ಷತಾ ಪಾರಿತೋಷಕವನ್ನು ಮೈಸೂರು ಮತ್ತು ಹುಬ್ಬಳ್ಳಿ ವಿಭಾಗಗಳು ಜಂಟಿಯಾಗಿ ಪಡೆದುಕೊಂಡವು. ಅತ್ಯುತ್ತಮವಾಗಿ ನಿರ್ವಹಿಸಿದ ಪ್ರಮುಖ ನಿಲ್ದಾಣ ಪ್ರಶಸ್ತಿ ಮೈಸೂರು ವಿಭಾಗದ ದಾವಣಗೆರೆ ನಿಲ್ದಾಣಕ್ಕೆ, ಅತ್ಯುತ್ತಮವಾಗಿ ನಿರ್ವಹಿಸಿದ ಸಣ್ಣ ನಿಲ್ದಾಣ ಪ್ರಶಸ್ತಿ ಹುಬ್ಬಳ್ಳಿ ವಿಭಾಗದ ಇಂಡಿ ರೋಡ್ ನಿಲ್ದಾಣಕ್ಕೆ ಲಭಿಸಿತು.

ಅಕೌಂಟ್ಸ್‌ ದಕ್ಷತಾ ಪಾರಿತೋಷಕ (ಮೈಸೂರು ವಿಭಾಗ), ವಾಣಿಜ್ಯ ದಕ್ಷತಾ (ಬೆಂಗಳೂರು ವಿಭಾಗ), ವಿದ್ಯುತ್‌ ದಕ್ಷತಾ (ಮೈಸೂರು ವಿಭಾಗ), ಎಂಜಿನಿಯರಿಂಗ್‌ ದಕ್ಷತಾ (ಹುಬ್ಬಳ್ಳಿ ವಿಭಾಗ), ಯಾಂತ್ರಿಕ ದಕ್ಷತಾ (ಬೆಂಗಳೂರು–ಹುಬ್ಬಳ್ಳಿ ವಿಭಾಗ), ವೈದ್ಯಕೀಯ ದಕ್ಷತಾ (ಮೈಸೂರು ವಿಭಾಗ), ಪರಿಚಾಲನಾ ದಕ್ಷತಾ (ಮೈಸೂರು ವಿಭಾಗ), ಸಿಬ್ಬಂದಿ ದಕ್ಷತಾ (ಹುಬ್ಬಳ್ಳಿ ವಿಭಾಗ) ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭದ್ರತಾ ದಕ್ಷತಾ (ಬೆಂಗಳೂರು ವಿಭಾಗ), ಸಿಗ್ನಲ್‌ ಮತ್ತು ಟೆಲಿ ಕಮ್ಯುನಿಕೇಷನ್ ದಕ್ಷತಾ (ಹುಬ್ಬಳ್ಳಿ ವಿಭಾಗ), ಭಂಡಾರ ದಕ್ಷತಾ–ಡೀಸೆಲ್‌ ಶೆಡ್‌ ಡಿಪೊ (ಬೆಂಗಳೂರು ವಿಭಾಗ), ಅಂತರ ವಿಭಾಗೀಯ ಸುರಕ್ಷತಾ (ಮೈಸೂರು ವಿಭಾಗ), ಅಂತರ ವಿಭಾಗೀಯ ರಾಜಭಾಷಾ ರೋಲಿಂಗ್‌ (ಬೆಂಗಳೂರು ವಿಭಾಗ), ಅತ್ಯುತ್ತಮ ರೇಕ್‌ ನಿರ್ವಹಣೆ (ಯಶವಂತಪುರ–ಅಹ್ಮದಾಬಾದ್-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು), ಡೀಸೆಲ್‌ ಶೆಡ್‌ ನಿರ್ವಹಣೆ (ಡೀಸೆಲ್‌ ಲೋಕೊ ಶೆಡ್‌, ಹುಬ್ಬಳ್ಳಿ), ನಿರುಪಯುಕ್ತ ವಸ್ತುಗಳ ನಿರ್ವಹಣೆ (ಹುಬ್ಬಳ್ಳಿ ವಿಭಾಗ) ಪ್ರಶಸ್ತಿಗಳನ್ನು ನೀಡಲಾಯಿತು.

ಸಂಶೋಧನೆ (ಡೀಸೆಲ್‌ ಲೋಕೊ ಶೆಡ್‌, ಹುಬ್ಬಳ್ಳಿ), ಮೊದಲನೇ ರನ್ನರ್ ಅಪ್ (ಕೋಚಿಂಗ್ ಡಿಪೊ ಬೆಂಗಳೂರು), ಎರಡನೇ ರನ್ನರ್ ಅಪ್ (ಸೆಂಟ್ರಲ್ ವರ್ಕ್ ಶಾಪ್ ಮೈಸೂರು) ವಿತರಿಸಲಾಯಿತು.

31 ಗೆಜೆಟೆಡ್‌ ಅಧಿಕಾರಿಗಳು ಮತ್ತು 218 ಸಿಬ್ಬಂದಿಗೆ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಬ್ಬರು ಮಹಿಳಾ ಸಿಬ್ಬಂದಿಗೆ ‘ವರ್ಷದ ಮಹಿಳೆ’ ಎಂದು ಸನ್ಮಾನಿಸಲಾಯಿತು.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಕಾರ್ಯಕ್ರಮ ಉದ್ಘಾಟಿಸಿದರು, ಮಹಿಳಾ ಕಲ್ಯಾಣ ಸಂಘಟನೆ ಅಧ್ಯಕ್ಷೆ ಡಾ. ವಂದನಾ ಶ್ರೀವಾಸ್ತವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT