ಗುರುವಾರ , ಅಕ್ಟೋಬರ್ 21, 2021
22 °C

ಮಾನವೀಯ ಮೌಲ್ಯದಿಂದ ಭಾವೈಕ್ಯ: ಮೂರುಸಾವಿರ ಮಠ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜಾತಿ-ಮತದ ಬೇಧವಿಲ್ಲದೆ ಎಲ್ಲರೂ ಒಂದು ಎಂಬ ಮನೋಭಾವನೆ ದೊಡ್ಡದು. ಇದರೊಂದಿಗೆ ಕಾಯಕ, ನಿಷ್ಠೆ, ಒಳ್ಳೆಯ ಸಂಸ್ಕಾರ ಇರುವುದರಿಂದ ಮಾನವೀಯ ಮೌಲ್ಯಗಳು ಭಾವೈಕ್ಯದ ಬೆಸುಗೆಯಾಗಲು ಸಾಧ್ಯವಾಗಿದೆ ಎಂದು ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಗಣೇಶ ಚತುರ್ಥಿಯ ದಿನ ಭಾವೈಕ್ಯ ಮೆರೆದ ಗೋಕುಲ ರಸ್ತೆ ಠಾಣೆ ಪೊಲೀಸ್‌ ಇನ್‌ಸ್ಟೆಕ್ಟರ್‌ ಜಾಕೀರ ಪಾಷಾ ಎಂ. ಕಾಲಿಮಿರ್ಚಿ ಅವರನ್ನು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ವತಿಯಿಂದ ಸನ್ಮಾನಿಸಿ ಮಾತನಾಡಿದ ಸ್ವಾಮೀಜಿ ‘ಕಾಲಿಮಿರ್ಚಿ ಅವರ ನಡೆ ಪ್ರಶಂಸನೆಗೆ ಅರ್ಹವಾದದ್ದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿದ್ದಾರೂಢ ಮಠದ ಸಮಿತಿ ಚೇರ್ಮನ್‌ ಡಿ.ಜಿ. ಮಾಳಗಿ ಮಾತನಾಡಿ ‘ಒಳ್ಳೆಯ ಭಾವನೆಗಳು, ನುಡಿ, ಸಂಸ್ಕಾರ ಮತ್ತು ಸ್ನೇಹ ಮನೋಭಾವನೆ ಇದ್ದಾಗ ಮಾತ್ರ ಮನುಷ್ಯ ಮುಂದೆ ಬರಲು ಸಾಧ್ಯ’ ಎಂದರು.

ಮಹಾಮಂಡಳದ ಉಪಾಧ್ಯಕ್ಷ ಅಲ್ತಾಫ ಕಿತ್ತೂರ, ಶಾಂತರಾಜ ಪೋಳ, ರಾಘವೇಂದ್ರ ಮುರಗೋಡ, ಎಸ್.ಎಸ್. ಕಮಡೊಳ್ಳಿಶೆಟ್ರು, ಅಮರೇಶ ಹಿಪ್ಪರಗಿ, ಚನ್ನಬಸಪ್ಪ ಧಾರವಾಡಶೆಟ್ಟರ, ಅನಿಲ ಬೇವಿನಕಟ್ಟಿ, ಎಸ್.ಎಂ. ಅಂಗಡಿ, ಈರಣ್ಣ ಪಾಳೇದ, ಮಹೇಶ ಪತ್ತಾರ, ಸಾಯಿನಾಥ ಹಿತ್ತಾಳೆ, ಈಶ್ವರ ನಾಯ್ಕರ, ಎಂ.ಎಂ. ಡಂಬಳ, ಚಂದ್ರಶೇಖರ ಗಾಣಿಗೇರ, ಸುರೇಶ ಮೆಣಸಗಿ, ಅನಿಲ ಕವಿಶೆಟ್ಟಿ, ಎಂ. ಎಸ್. ಶಿರಗಣ್ಣನವರ ಪಾಲ್ಗೊಂಡಿದ್ದರು.

ಸಂಗೀತಾ ಇಜಾರದ, ರೂಪಾ ಅಂಗಡಿ, ಸರಸ್ವತಿ ಮೆಹರವಾಡೆ, ಅಕ್ಕಮ್ಮಾ ಕಂಬಳಿ ಕಾಲಿಮಿರ್ಚಿ ಅವರಿಗೆ ರಾಖಿ ಕಟ್ಟಿ ರಕ್ಷಾಬಂಧನ ಆಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು