ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಗುಂದ: ರಾಮಲಿಂಗ ಕಾಮಣ್ಣ ದೇವರ ದರ್ಶನ ಪಡೆದ ಪ್ರಹ್ಲಾದ ಜೋಶಿ

Published 25 ಮಾರ್ಚ್ 2024, 16:05 IST
Last Updated 25 ಮಾರ್ಚ್ 2024, 16:05 IST
ಅಕ್ಷರ ಗಾತ್ರ

ನವಲಗುಂದ: ಉತ್ತರ ಕರ್ನಾಟಕದ ಜನಪ್ರಿಯ ಹಾಗೂ ಬೇಡಿದ ವರವ ನೀಡುವ ದೇವರೆಂದೇ ಪ್ರಸಿದ್ಧವಾದ ರಾಮಲಿಂಗ ಕಾಮಣ್ಣ ದೇವರಿಗೆ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ನಂತರ ಪ್ರಹ್ಲಾದ ಜೋಶಿ ಮಾಧ್ಯಮದವರೊಂದಿಗೆ ಮಾತನಾಡಿ, ಹೋಳಿ ಹುಣ್ಣಿಮೆಯ ಶುಭ ಸಂದರ್ಭದಲ್ಲಿ ಶ್ರೀ ಕಾಮಣ್ಣನ ಮೂರ್ತಿ ಪ್ರತಿಷ್ಟಾಪಿಸಿ ಆರಾಧಿಸುವುದು ನಮ್ಮ ಪದ್ಧತಿ. ಅಂತೆಯೇ ನವಲಗುಂದದಲ್ಲಿ ಕಾಮಣ್ಣನ ದರ್ಶನ ಪಡೆದು ಪೂಜೆ‌ ಸಲ್ಲಿಸಿ, ಸಕಲರ ಒಳಿತಿಗಾಗಿ ಪ್ರಾರ್ಥಿಸಿ ಪುನೀತನಾಗಿದ್ದೇನೆ. ದೇವರ ಅನುಗ್ರಹ ಎಲ್ಲರ ಮೇಲೆ ಇರಲಿ ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನವಲಗುಂದ ನಗರದಲ್ಲಿ ಹೊಳಿ ಹಬ್ಬದ ಪ್ರಯುಕ್ತ ಪ್ರತಿಷ್ಠಾಪನೆಗೊಂಡು ಭಕ್ತರು ಬೇಡಿದ್ದನ್ನು ಕರುಣಿಸುವ, ಕಲಿಯುಗದ ಕಾಮದೇವರ ದರ್ಶನವನ್ನು ನಾವು ಶ್ರದ್ಧಾ - ಭಕ್ತಿಯಿಂದ ದರ್ಶನ ಮಾಡಿದಾಗ ಮಾತ್ರ ಅದರ ಪೂರ್ಣ ಫಲ ನಮಗೆ ಪ್ರಾಪ್ತವಾಗುತ್ತದೆ. ದೇವರ ಅನುಗ್ರಹದಿಂದ ರಾಜ್ಯದಲ್ಲಿ ಚನ್ನಾಗಿ ಮಳೆಯಾಗಿ ರೈತರ ಸಂಕಷ್ಟ ದೂರವಾಗಲಿ ಎಂದರು.

ಮುಖಂಡರಾದ ಸಿದ್ದನಗೌಡ ಪಾಟೀಲ (ಅಡ್ನೂರ), ಷಣ್ಮುಖ ಗುರಿಕಾರ, ಸುರೇಶ ಗಾಣಿಗೇರ, ಅಣ್ಣಪ್ಪ ಬಾಗಿ ಸೇರಿದಂತೆ ಪಕ್ಷದ ಪ್ರಮುಖರು ಕಾರ್ಯಕರ್ತರು ಹಾಗೂ ಊರ ಹಿರಿಯರು, ಕಾಮಣ್ಣ ಪ್ರತಿಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT