ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ಧಪ್ಪಜ್ಜರ 103ನೇ ಪುಣ್ಯಾರಾಧನೆ ಏ.9ರಂದು

Published 30 ಮಾರ್ಚ್ 2024, 14:32 IST
Last Updated 30 ಮಾರ್ಚ್ 2024, 14:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಲ್ಲಿನ ಉಣಕಲ್‌ನ ಸದ್ಗುರು ಸಿದ್ಧಪ್ಪಜ್ಜರ  ಯುಗಾದಿ ಮಹೋತ್ಸವ, ರಥೋತ್ಸವ ಹಾಗೂ 103ನೇ ವರ್ಷದ ಪುಣ್ಯಾರಾಧನೆ ಮಹೋತ್ಸವವು ಏಪ್ರಿಲ್ 9ರಂದು ಸಂಜೆ 5.30ಕ್ಕೆ ನಡೆಯಲಿದೆ’ ಎಂದು ಸದ್ಗುರು ಸಿದ್ಧಪ್ಪಜ್ಜ ಹೊಸಮಠದ ಟ್ರಸ್ಟ್ ಕಮಿಟಿಯ ಪ್ರಮುಖರಾದ ರಾಜಣ್ಣ ಕೊರವಿ ಹೇಳಿದರು.

‘ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಗ್ಗೆ ಸಿದ್ಧಪ್ಪಜ್ಜರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಮಹಾಪೂಜೆ ಜರುಗಲಿದೆ‌. ನಂತರ 10.30ಕ್ಕೆ ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ, ಉಣಕಲ್‌ನ ಗುರುಸಿದ್ದಯ್ಯ ಹಿರೇಮಠ  ಹಾಗೂ ಸವಣೂರಿನ ಮಹಾಂತಯ್ಯ ಸ್ವಾಮಿ ಹಿರೇಮಠ ಪೌರೋಹಿತ್ಯದಲ್ಲಿ ಸಾಮೂಹಿಕ ವಿವಾಹ ನಡೆಯಲಿವೆ. ರಾತ್ರಿ 10 ಗಂಟೆಗೆ ದುರ್ಗಾದೇವಿ ಗುಡಿ ಬಯಲಿನಲ್ಲಿ ಸಂಗೀತ ಕಾರ್ಯಕ್ರಮ ಜರುಗಲಿದೆ‌’ ಎಂದು ತಿಳಿಸಿದರು.

‘ಏ.10ರಿಂದ 13ರವರೆಗೆ ಪ್ರತಿದಿನ ಸಂಜೆ 4 ಗಂಟೆಗೆ ಕುಸ್ತಿ ಪಂದ್ಯಾವಳಿ, ಸಂಜೆ 6.30ರಿಂದ ಸಿದ್ಧೇಶ್ವರ   ಕೈಲಾಸ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಏ.13ರಂದು ಸಂಜೆ 7 ಗಂಟೆಗೆ ಹುಬ್ಬಳ್ಳಿ ಎರಡೆತ್ತಿ‌ನಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ತೇರಿನ ಕಳಸ ಇಳಿಸುವ ಪೂಜಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಗೆ ಭಜನಾ ಸ್ಪರ್ಧೆ ಜರುಗಲಿದೆ‌’ ಎಂದರು‌.

‘ಹುಕ್ಕೇರಿ ಬಸವಬೆಳವಿಯ ವಿರಕ್ತಮಠದ ಶರಣಬಸವ ದೇವರು, ಚರಮೂರ್ತಿ ಚರಂತೇಶ್ವರ ಸ್ವಾಮೀಜಿ ಅವರಿಂದ ಏ. 4ರವರೆಗೆ ಪ್ರವಚನ ಕಾರ್ಯಕ್ರಮ ಇರಲಿದೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಾಜಿ ಬನ್ನಿಕೊಪ್ಪ, ಎಸ್.ಐ.ನೇಕಾರ, ಶಿವಣ್ಣ, ರಾಮಣ್ಣ ಪದ್ಮಣ್ಣವರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT