ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಮಾನವತಾವಾದ ಸಾರಿದ ಮಹನೀಯ ಬಸವಣ್ಣ‘

Published 10 ಮೇ 2024, 15:38 IST
Last Updated 10 ಮೇ 2024, 15:38 IST
ಅಕ್ಷರ ಗಾತ್ರ

ಧಾರವಾಡ: ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಮಾನವತಾವಾದವನ್ನು ಸಾರಿದ ಮಹನೀಯ ಎಂದು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಯು.ಬೆಳ್ಳಕ್ಕಿ ಹೇಳಿದರು.

ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಕಾಯಕವೇ ಕೈಲಾಸ‘, ’ದಯವೇ ಧರ್ಮದ ಮೂಲವಯ್ಯ’ ಎಂದು ಅವರು ಸಾರಿದರು. ಬಸವಣ್ಣನವರು ತಿಳಿಸಿದಂತೆ ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಹೇಳಿದರು.

ಬಸವಣ್ಣನವರ ತಮ್ಮ ವಚನಗಳ ಮೂಲಕ  ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಜನರಿಗೆ ತಿಳಿಸಿದರು. ಬಸವಣ್ಣನವರ ವಚನ ಮಾರ್ಗದಲ್ಲಿ ಎಲ್ಗಿೂ ಸಾಗಿದರೆ ಸಮಾಜವು ಶಾಂತಿಯ ತೋಟವಾಗಿ ಮಾರ್ಪಡುವದು. ಅವರ ವಚನಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

ಆಡಳಿತ ಮಂಡಳಿಯ ಸದಸ್ಯ ಬಿ.ಎಸ್.ತಾಳಿಕೋಟಿ, ಪ್ರಾಚಾರ್ಯ ಎಸ್.ಎಂ.ಬಮ್ಮನಗೌಡರ, ಎಸ್.ಎಲ್.ಪಾಟೀಲ,ಭುವನೇಶ್ವರಿ ದಂಡಿನ, ಡಿ.ಬಿ.ಹೊಂಬಳ, ಶಿವಲಿಂಗ ನೀಲಗುಂದ ಎಸ್.ಬಿ.ಮಗದುಮ್ಮ, ಎಲ್.ಎಸ್.ತಳ್ಳಿ, ಎಸ್.ಎಫ್.ಕರಡಿಗುಡ್ಡ, ಮಹಾಂತೇಶ ಕ್ವಾಟಿ, ಮೃತ್ಯುಂಜಯ ಅಮರಗೋಳ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT