ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಶಾಲೆಗೆ ₹50 ಸಾವಿರ ನೀಡಿದ ದಾನಿ

Published 14 ಡಿಸೆಂಬರ್ 2023, 14:17 IST
Last Updated 14 ಡಿಸೆಂಬರ್ 2023, 14:17 IST
ಅಕ್ಷರ ಗಾತ್ರ

ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದ ಜಿ.ಎಂ.ಮಾಕಣ್ಣವರ ಅವರು ತಮ್ಮ ತಂದೆ ದಿ. ಮಾಕಪ್ಪ ಕಲ್ಲಪ್ಪ ಮಾಕಣ್ಣವರ ಹಾಗೂ ತಾಯಿ ಶಾಂತಮ್ಮ ಮಾಕಣ್ಣವರ ಹೆಸರಿನಲ್ಲಿ ಸರ್ಕಾರಿ ಶಾಲೆಗೆ ₹50ಸಾವಿರ ದೇಣಿಗೆ ನೀಡಿದರು.

ಜಿ.ಎಂ. ಮಾಕಣ್ಣವರ ಮಾತನಾಡಿ, ‘ತಂದೆ–ತಾಯಿ ಋಣ ತೀರಿಸಲು ಸಾಧ್ಯವಿಲ್ಲ. ಕೈಲಾದಷ್ಟು ಸಹಾಯ ನೀಡಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಉತ್ತೇಜನ ನೀಡಿ ತಂದೆ-ತಾಯಿ ಹೆಸರನ್ನು ಜೀವಂತವಾಗಿ ಉಳಿಯಲು ಒಂದು ಅಳಿಲು ಸೇವೆ’ ಎಂದು ಹೇಳಿದರು. ಈ ವೇಳೆ ಅವರನ್ನು ಸನ್ಮಾನಿಸಲಾಯಿತು.

ಶಾಲೆ ಮುಖ್ಯ ಶಿಕ್ಷಕಿ ಇಂದುಮತಿ ವಿಷ್ಣುನಾಯ್ಕ ದತ್ತಿನಿಧಿ ಚೆಕ್ ಸ್ವೀಕರಿಸಿ, ಮಾಕಣ್ಣವರ ಅವನ್ನು ಅಭಿನಂದಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ.ಕೊಪ್ಪದ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಗುರುನಾಥ್ ಉಳ್ಳಾಗಡ್ಡಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎನ್.ವಿ.ಕುರವತ್ತಿಮಠ, ಚಿದಾನಂದ ಮುತ್ತಣ್ಣವರ, ನಾಗಲಿಂಗಪ್ಪ ಉಳ್ಳಾಗಡ್ಡಿ, ಶಿವನಗೌಡ ಕುಲಕರ್ಣಿ, ಶಾಲಾ ಶಿಕ್ಷಕರಾದ ಕಟಗಿ ಡಿ.ಕೆ.ವಿಜಯಲಕ್ಷ್ಮೀ, ಸುಜಾತಾ ನಾಯ್ಕರ, ಅರವಿಂದ್ ಪಾಟೀಲ್, ಮಹಾದೇವಪ್ಪ ಬೆಳವಟಗಿ, ಎಲ್.ವೈ.ರಾಯಪ್ಪನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT