ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜಕ್ಕೆ ಬೇಕು ಒಳ್ಳೆಯ ನುಡಿಗಳು

ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ
Published 15 ಫೆಬ್ರುವರಿ 2024, 14:06 IST
Last Updated 15 ಫೆಬ್ರುವರಿ 2024, 14:06 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ‘ಕತ್ತಲೆಯೊಳಗೆ ದೀಪದ ಅವಶ್ಯಕತೆ ಇರುವಂತೆಯೇ ಸಮಾಜದಲ್ಲಿಯೂ ನಾಲ್ಕು ಒಳ್ಳೆಯ ಮಾತುಗಳ ಅವಶ್ಯಕತೆಯಿದೆ’ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

ಸಮೀಪದ ಹನುಮನಕೊಪ್ಪ ಗ್ರಾಮದ ಇಮಾಮ ಹಸನ್ ಮತ್ತು ಹುಸೇನ್ ಮಸೂತಿ ಹಾಗೂ ಕಲ್ಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಹಜರತ್ ಇಮಾಮ ಹುಸೇನ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪ್ರಪಂಚದಲ್ಲಿ ನೀರು, ಅನ್ನಕ್ಕೆ ಎಷ್ಟು ಮಹತ್ವವಿದೆಯೋ, ಧರ್ಮದ ವಿಚಾರಗಳಿಗೂ ಅಷ್ಟೇ ಮಹತ್ವವಿದೆ. ಶಾಂತಿ, ನೆಮ್ಮದಿ, ಸೌಹಾರ್ದ ಅಮೂಲ್ಯವಾದ ಅಂಶಗಳು. ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಭಾವ ಬಿತ್ತುವುದು ಧರ್ಮಗುರುಗಳ ಜವಾಬ್ದಾರಿ. ಎಲ್ಲರ ಮನಸ್ಸು ತಿಳಿಯಾಗಿದ್ದರೆ ಪರಮಾತ್ಮನ ದರ್ಶನವಾಗುತ್ತದೆ’ ಎಂದರು.

ಹೈದರಾಬಾದ್‌ನ ಜಗದ್ಗುರು ಆಶ್ರಮದ ಪಂಡಿತ ಮೌಲಾನಾ ಸಯ್ಯದ್ ಬಾಷಾ ಮಾತನಾಡಿ, ‘ಹಜರತ್ ಇಮಾಮ್ ಹುಸೇನಿಯವರು ಧರ್ಮ ಮತ್ತು ಸಮಾಜದ ಉದ್ಧಾರಕ್ಕೆ ತಮ್ಮ ಜೀವನವನ್ನು ಸವೆಸಿದರು. ದೇವನೋಬ್ಬ ನಾಮ ಹಲವು ಎಂದು ಜಗತ್ತಿಗೆ ಸಾರಿದರು. ಶಾಂತಿಯ ಮೂಲ ಇಸ್ಲಾಂ, ಇದು ಮಾನವ ಧರ್ಮ ಶ್ರೇಷ್ಠ ಎಂದು ತಿಳಿ ಹೇಳುತ್ತದೆ’ ಎಂದು ಹೇಳಿದರು.

ಹನುಮನಕೊಪ್ಪ ಗ್ರಾಮದ ಇಸ್ಲಾಂ ಧರ್ಮಗುರು ಅರಿಪುಲ್ ಹಕ್ ಶಾ ಖಾದರಿ ಕಲಂದರ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹನುಮನಕೊಪ್ಪ ಗ್ರಾಮದ ಸೂಫಿ ಅಬ್ದುಲ್ ರೆಹಮಾನ್ ಉರ್ಫ್ ಶಮಾನಿಯಾಜ್, ಮೃತ್ಯುಂಜಯ ಯರಗಂಬಳಿಮಠ, ಹಸನ್ ಬೇಗ್ ಜೋರಮ್ಮನವರ, ಕಲ್ಲಪ್ಪ ಪುಡಕಲಕಟ್ಟಿ, ರಾಮಲಿಂಗಪ್ಪ ನವಲಗುಂದ, ಇಮಾಮಹುಸೇನ್ ಮುಜಾವರ, ಬಸೀರಅಹ್ಮದ್ ಮಾಳಗಿಮನಿ, ಮಹೇಶ ಬೊಬ್ಬಿ, ಸುರೇಶಬಾಬು ತಳವಾರ, ಪರಮೇಶ್ವರ ದೊಡವಾಡ, ಐ.ಎಂ.ಛಡೀದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT