ಜೈನರೆಂಬ ಗಟ್ಟಿದನಿ ಮೊಳಗಲಿ: ಪ್ರೊ. ಶುಭಚಂದ್ರ ಮೈಸೂರು

7
ಹತ್ತು ದಿನಗಳ ದಶಲಕ್ಷಣ ಪರ್ವ ಆರಂಭ;

ಜೈನರೆಂಬ ಗಟ್ಟಿದನಿ ಮೊಳಗಲಿ: ಪ್ರೊ. ಶುಭಚಂದ್ರ ಮೈಸೂರು

Published:
Updated:
Deccan Herald

ಹುಬ್ಬಳ್ಳಿ: ‘ಷಿಕಾಗೊದಲ್ಲಿ ಸ್ವಾಮಿ ವಿವೇಕಾನಂದರು ಭಾಷಣ ಮಾಡಿ ಈಗ 125 ವರ್ಷಗಳಾಗಿದ್ದು, ಅವರ ಭಾಷಣ ಜಗತ್‌ ಪ್ರಸಿದ್ದಿ ಪಡೆದಿದೆ. ಆದರೆ, ಅವರಿಗೆ ಧರ್ಮ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕೊಡಿಸಿದವರನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ’ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಶುಭಚಂದ್ರ ಮೈಸೂರು ಬೇಸರ ವ್ಯಕ್ತಪಡಿಸಿದರು.

ದಕ್ಷಿಣ ಭಾರತ ಜೈನ ಸಭೆಯ ಅಂಗಸಂಸ್ಥೆ ದಿಗಂಬರ ಜೈನ ಬೋರ್ಡಿಂಗ್‌, ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಬ್ರಹ್ಮಿಲಾ ಮಹಿಳಾ ಪರಿಷತ್‌ ಸಹಯೋಗದಲ್ಲಿ ಶುಕ್ರವಾರ ಇಲ್ಲಿ ಆರಂಭವಾದ ದಶಲಕ್ಷಣ ಪರ್ವದ ಕಾರ್ಯಕ್ರಮದಲ್ಲಿ ಅವರು ‘ಉತ್ತಮ ಕ್ಷಮಾಧರ್ಮ’ ಕುರಿತು ಮಾತನಾಡಿದರು.

‘ಒಂದೊಂದು ಧರ್ಮದ ಬಗ್ಗೆ ಮಾತನಾಡಲು ವಿದ್ವಾಂಸರನ್ನು ಧರ್ಮಸಭೆಗೆ ಆಹ್ವಾನಿಸಲಾಗಿತ್ತು. ಜೈನ ಧರ್ಮದ ಪ್ರತಿನಿಧಿಯಾಗಿ ವೀರಚಂದ ರಾಘವಜೀ ಗಾಂಧಿ ಮತ್ತು ಬೌದ್ಧ ಧರ್ಮದ ಪ್ರತಿನಿಧಿಯಾಗಿ ಅನಗಾರಿಕಾ ಧರ್ಮಪಾಲ ತೆರಳಿದ್ದರು. ಆ ಸಭೆಗೆ ಸ್ವಾಮಿ ವಿವೇಕಾನಂದರಿಗೆ ಆಹ್ವಾನವಿಲ್ಲದೇ ಇದ್ದಾಗ ಧರ್ಮಪಾಲ ಅವರು ಭಾಷಣ ಮಾಡಲು ಅವಕಾಶ ಕೊಡಿಸಿದರು. ಧರ್ಮಸಭೆಗೆ ತೆರಳಿದ್ದ ರಾಘವಜೀ ಗಾಂಧಿ ಆಗ  ಅಮೆರಿಕದಲ್ಲಿ ಜೈನ ಧರ್ಮದ ಬಗ್ಗೆ ‍ಸಾಕಷ್ಟು ಪ್ರಚಾರ ಮಾಡಿದ್ದರು. ಇಲ್ಲವಾದರೆ ಜೈನ ಧರ್ಮಕ್ಕೆ ಈಗ ದೊಡ್ಡ ಕಂಟಕ ಎದುರಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

‘ನಾವು ಶ್ವೇತಾಂಬರರು, ದಿಗಂಬರರು ಎನ್ನುವ ಪಂಥ ಭೇದ ದೂರವಿಟ್ಟು, ನಾವೆಲ್ಲರೂ ಜೈನರು ಎನ್ನುವ ಗಟ್ಟಿಧ್ವನಿ ಮೊಳಗಬೇಕು. ಎಲ್ಲ ಮುನಿಗಳು ಕ್ಷಮಾ ಧರ್ಮ ಪಾಲನೆ ಮಾಡಿದ್ದರಿಂದ ಸಾಕಷ್ಟು ತೀರ್ಥಂಕರರು ಬಂದು ಹೋದರು. ಕ್ಷಮಿಸುವ ಗುಣ, ಶಾಂತಿ, ಸಹನೆ ಮತ್ತು ಅಹಿಂಸಾ ಮನೋಭಾವ ಎಲ್ಲರಲ್ಲೂ ಇರಬೇಕು’ ಎಂದು ಹೇಳಿದರು.

ದಿಗಂಬರ ಜೈನ ಬೋರ್ಡಿಂಗ್‌ನ ಅಧ್ಯಕ್ಷ ಮಹಾವೀರ ಡಿ. ದಾನೊಳ್ಳಿ, ಉಪಾಧ್ಯಕ್ಷ ವಿದ್ಯಾಧರ ಪಾಟೀಲ, ಹೆಸ್ಕಾಂ ತಾಂತ್ರಿಕ ನಿರ್ದೇಶಕ ಬಿ.ಟಿ. ಪ್ರಕಾಶ ಕುಮಾರ, ಹೊಂಬೂಜ ಕ್ಷೇತ್ರ ಜೈನಮಠದ ಆಡಳಿತಾಧಿಕಾರಿ ಸುಧೀರ ಎ. ಕುಸನಾಳೆ, ವಿದ್ಯಾನಿಕೇತನ ಪದವಿಪೂರ್ವ ಮಹಾವಿದ್ಯಾಲಯದ ಅನೀಲ ಎಚ್‌. ಚೌಗಲೆ, ರತ್ನಾಕರ, ಮಹಾವೀರ ಸೂಜಿ, ದತ್ತಾ ಡೋರ್ತಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !