ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿಗಳು ಕೌಶಲ ಅಭಿವೃದ್ಧಿ ಪಡಿಸಿಕೊಳ್ಳಿ: ಪ್ರೊ. ಅರಿಕಟ್ಟಿ

Published 18 ಮೇ 2024, 13:55 IST
Last Updated 18 ಮೇ 2024, 13:55 IST
ಅಕ್ಷರ ಗಾತ್ರ

ಕುಂದಗೋಳ: ‘ಕೌಶಲಗಳನ್ನು ಹೊಂದಿದ ಒಬ್ಬ ಅವಿದ್ಯಾವಂತ ನೂರು ಕೌಶಲ ರಹಿತ ವಿದ್ಯಾವಂತರಿಗಿಂತ ಉತ್ತಮ. ಇಂದಿನ ಆಧುನಿಕ ಜಗತ್ತಿನಲ್ಲಿ ಕೌಶಲಗಳಿಲ್ಲದ ಮನುಷ್ಯನಿಗೆ ಬೆಲೆಯಿಲ್ಲ’ ಎಂದು ಜಿ.ಎಸ್ ಪಾಟೀಲ ಕಾಲೇಜಿನ ಪ್ರಾಚಾರ್ಯ ಪ್ರೊ.ಜೆ.ಎನ್ ಅರಿಕಟ್ಟಿ ಹೇಳಿದರು.

ಪಟ್ಟಣದ ಜೆ.ಎಸ್.ಎಸ್ ವಿದ್ಯಾಪೀಠದ ಜಿ.ಎಸ್ ಪಾಟೀಲ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಶುಕ್ರವಾರ ನಡೆದ ‘ಪದವಿ ನಂತರ ಉದ್ಯೋಗವಕಾಶ ಮತ್ತು ಕೌಶಲ ಅಭಿವೃದ್ಧಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಸಂತೋಷ ಮತ್ತು ಹಿದಿಯತ್, ಜೆ.ಎಸ್.ಎಸ್ ವಿದ್ಯಾಪೀಠದ ಕಾರ್ಯದರ್ಶಿ ವೈ.ಎಸ್ ಮೇಗುಂಡಿ, ಪ್ರೊ.ಟಿ.ಎ ಚಿತ್ತರಗಿ, ಪ್ರೊ. ಎಂ.ಎಂ ಬುಡಶೆಟ್ಟಿ, ಎಸ್.ಎಸ್ ಪಾಟೀಲ, ಎ.ವೈ ಭಜಂತ್ರಿ, ಎಂ.ಜಿ ನಧಾಪ, ಎಂ.ಎಸ್ ಬ್ಯಾಳ್ಯಾಳ, ವಿದ್ಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT