ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾವಿದರ ಬದುಕು ಇಂದು ಕಷ್ಟಕರ: ಸ್ವಾಮೀಜಿ

Published 29 ಜನವರಿ 2024, 15:44 IST
Last Updated 29 ಜನವರಿ 2024, 15:44 IST
ಅಕ್ಷರ ಗಾತ್ರ

ಅಣ್ಣಿಗೇರಿ: ಇಂದಿನ ದಿನಮಾನಗಳಲ್ಲಿ ಸಂತ ಮಹಾತ್ಮರ ಜೀವನ ಚರಿತ್ರೆಯ ವಿಷಯವನ್ನು ನಾಟಕ ಹಾಗೂ ಪುಸ್ತಕಗಳ ಮೂಲಕ ಮಾತ್ರ ತಿಳಿಯಲು ಸಾಧ್ಯ ಎಂದು ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

ಪಟ್ಟಣದ ಪುರಸಭೆ ಮುಂಭಾಗದಲ್ಲಿ ಸೋಮವಾರ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘದಿಂದ ಹಮ್ಮಿಕೊಂಡ ಸಂತ ಶಿಶುನಾಳ ಶರೀಫರ ಜೀವನಚರಿತ್ರೆಯ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದು ತಂತ್ರಜ್ಞಾನ ಮತ್ತು ಅಂತರ್ಜಾಲದ ಸವಲತ್ತು ಹೆಚ್ಚಾಗಿದ್ದರಿಂದ ಕಲಾವಿದರ ಬದುಕು ಬಹಳ ಕಷ್ಟಕರವಾಗಿದೆ’ ಎಂದರು.  

ಮುಖಂಡರಾದ ಷಣ್ಮುಖ ಗುರಿಕಾರ, ರಾಮಣ್ಣ ಕಾಳಪ್ಪನವರ, ಷಣ್ಮುಖ ತೋಟಾಕಾವ, ಪ್ರವೀಣ ಬಾಗಲಕೋಟಿ, ಸಲೀಂ ಮುಲ್ಲಾ, ಎ.ಪಿ.ಗುರಿಕಾರ, ವಿಜಯಕುಮಾರ ಬಂಗಾರಿಮಠ, ಸಂಗಮ ಹಿರೇಮಠ, ಪಾಂಡುರಂಗ ಓಸೇಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT