ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಬೆಟಗೇರಿ: ಸಾರಿಗೆ ಬಸ್ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು

Published 29 ಡಿಸೆಂಬರ್ 2023, 13:53 IST
Last Updated 29 ಡಿಸೆಂಬರ್ 2023, 13:53 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಬೆಳಿಗ್ಗೆ ಸಮಯದಲ್ಲಿ ಹೆಚ್ಚುವರಿ ಸಾರಿಗೆ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದೆ ಇದ್ದುದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಏಳು ಬಸ್‌ಗಳನ್ನು ಶುಕ್ರವಾರ ಉಪ್ಪಿನಬೆಟಗೇರಿ ಹೊಸ ಬಸ್ ನಿಲ್ಧಾಣದಲ್ಲಿ 3 ತಾಸು ತಡೆದು ಪ್ರತಿಭಟಿಸಿದರು.

ಈ ವೇಳೆ ಬಸ್ ನಿಲ್ದಾಣಕ್ಕೆ ಆಗಮಿಸಿದ ನಿಯಂತ್ರಣಾಧಿಕಾರಿ ಬಸವರಾಜ ಗಾಡದ ಧಾರವಾಡದ ಬಸ್ ಡಿಪೊ ಮ್ಯಾನೇಜರ್ ಗೆ ಕರೆ ಮಾಡಿ, ನಾಳೆಯಿಂದ ಹೆಚ್ಚುವರಿ ಸಾರಿಗೆ ಬಸ್‌ಗಳನ್ನು ಒದಗಿಸಲು ತಿಳಿಸಿದರು. ಇದಕ್ಕೆ ಸಮ್ಮತಿ ನೀಡದ ವಿದ್ಯಾರ್ಥಿಗಳು, ಸಾರಿಗೆ ಇಲಾಖೆ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುವವರೆಗೂ ಬಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದರು.

ಧಾರವಾಡದ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ. ಎ.ಟಿ.ಆಯ್.ಆರ್. ಸಾರಿಗೆ ಅಧಿಕಾರಿ ದೇವರಾಜ ಭಜಂತ್ರಿ, ಗರಗ ಪಿ.ಎಸ್ಐ ಎಸ್.ಎಂ.ಮಂಟೂರ, ಬಸವರಾಜ ಸೊಗಾ, ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ ಮಸೂತಿ, ಬಾಬಾ ಮೊಹಿದ್ದಿನ ಚೌಧರಿ, ಸಲಾಂ ಲಾಲ್ಮೀಯಾ ಬಸ್ ನಿಲ್ಧಾಣಕ್ಕೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

ಸಾರಿಗೆ ಇಲಾಖೆ ಹಿರಿಯ ಅಧಿಕಾರಿ ದೇವರಾಜ ಭಜಂತ್ರಿ ಮಾತನಾಡಿ, ‘ಸಾರಿಗೆ ಬಸ್ ಗಳು ಸಾರ್ವಜನಿಕರ ಆಸ್ತಿ. ನಿಮ್ಮ ಬೇಡಿಕೆಯಂತೆ ಹೆಚ್ಚುವರಿ ಸಾರಿಗೆ ಬಸ್ ಒದಗಿಸಲು ಕ್ರಮ ಜರುಗಿಸಲಾಗುವುದು’ ಎಂದು ಭರವಸೆ ನೀಡಿದರು.

ನಂತರ ಆಯಾ ಊರುಗಳಿಗೆ ತೆರಳುವ ಬಸ್‌ಗಳನ್ನು ಬಿಡಲಾಯಿತು. ಕೆಲ ಹೊತ್ತು ಸಂಚಾರ ದಟ್ಟಣೆ ಉಂಟಾಗಿ ಖಾಸಗಿ ವಾಹನಗಳು, ಸುತ್ತಲಿನ ಗ್ರಾಮದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT