ಧಾರವಾಡ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಕಳೆದ ಮೂರು ದಿನಗಳಿಂದ ತಂದ್ದ ರೆಡ್ ರಿಬ್ಬನ್ ಎಕ್ಸಪ್ರೆಸ್ ರೈಲು ಅಭಿಯಾನ ಯಶಸ್ವಿಯಾಗಿ ಪೂರೈಸಿದ್ದು, 36 ಸಾವಿರಕ್ಕಿಂತಲೂ ಹೆಚ್ಚು ಜನರು ರೈಲನ್ನು ವೀಕಿಸಿದ್ದಾರೆ.

ಎಚ್ಐವಿ ಜಾಗೃತಿಯ ಆಭಿಯಾನದ ಅಂಗವಾಗಿ ಧಾರವಾಡಕ್ಕೆ ಆಗಮಿಸಿದ್ದ ರೆಡ್ ರಿಬ್ಬನ್ ಎಕ್ಸಪ್ರೆಸ್ ರೈಲಿಗೆ ಸೋಮವಾರ ಕೊನೆಯ ದಿನವಾಗಿದ್ದು, 15,916 ಜನರು ರೆಡ್ ರಿಬ್ಬನ್ ಎಕ್ಸಪ್ರೆಸ್ನ್ನು ವೀಕ್ಷಿಸಿದರು. ಇಂದು ಸಂಜೆ ರೈಲು ಗದಗ ಜಿಲ್ಲೆಗೆ ತೆರಳಿತು.

`ರೈಲನ್ನು ನೋಡಲು ಗ್ರಾಮ ಪಂಚಾಯಿತಿ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರೂ ಸೇರಿದಂತೆ ಗ್ರಾಮೀಣ ಪ್ರದೇಶದ ಸಾರ್ವಜನಿಕರು ಆಗಮಿಸಿದ್ದರು. ಎಚ್ಐವಿ ಬಗ್ಗೆ ಅರಿವನ್ನು ಮೂಡಿಸಲು ಈ ಮೂರು ದಿನಗಳಲ್ಲಿ ಸಾಧ್ಯವಾಗಿದೆ~ ಎಂದು ಜಿಲ್ಲಾ ಏಡ್ಸ್ ನಿರೋಧಕ ಮತು ನಿರ್ಬಂಧಕ ಘಟಕದ ಅಧಿಕಾರಿ ಡಾ. ಬಿ.ಡಿ. ಕಿತ್ತೂರ್ ಹೇಳಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಒಟ್ಟು 19 ಸಮಗ್ರ ಆಪ್ತಸಮಾಲೋಚನೆ ಮತ್ತು ಎಚ್ಐವಿ ಪರೀಕ್ಷಾ ಕೇಂದ್ರಗಳು (ಐಸಿಟಿಸಿ) ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಉಚಿತವಾಗಿ ಎಚ್ಐವಿ ಪರೀಕ್ಷೆಯನ್ನು ಮಾಡಲಾಗುವುದು ಮತ್ತು ಪರೀಕ್ಷೆಗೊಳಪಟ್ಟ ವ್ಯಕ್ತಿಗಳ ಎಲ್ಲ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಸಾರ್ವಜನಿಕರು ಎಚ್ಐವಿ ಸಂದೇಹವಿದ್ದಲ್ಲಿ ಐಸಿಟಿಸಿ ಕೇಂದ್ರಗಳಿಗೆ ಭೇಟಿ ನೀಡಬಹುದು ಎಂದು ಅವರು ಮನವಿ ಮಾಡಿದ್ದಾರೆ.

ರೆಡ್ ರಿಬ್ಬನ್ ಎಕ್ಸ್ಪ್ರೆಸ್ ರೈಲಿನ ಮೂರನೆ ದಿನ ಸಮಾರು 439 ಜನರಿಗೆ ಅಪ್ತ ಸಮಲೋಚನೆ ಮಾಡಲಾಯಿತು. 435 ಜನರು ಸ್ವಯಂ ಪ್ರೇರಿತರಾಗಿ ಎಚ್ಐವಿ ಸಪಾಸಣೆ ಮಾಡಿಸಿಕೊಂಡರು. ರೆಡ್ ರಿಬ್ಬನ್ ಏಕ್ಸ್ಪ್ರೆಸ್ನ ತರಬೇತಿ ಬೋಗಿಯಲ್ಲಿ 14 ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೊಲೀಸ್ ಪ್ರಶಿಕ್ಷಣಾರ್ಥಿಗಳು, ಎನ್ಸಿಸಿ ಹಾಗೂ ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸದಸ್ಯರಿಗೆ ತರಬೇತಿ ನೀಡಲಾಯಿತು. ಈ ತರಬೇತಿಯಲ್ಲಿ ಒಟ್ಟು 843 ಜನರು ಭಾಗಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.