ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಗುಂದ: ಹಿರಿಯ ಕಲಾವಿದರಿಗೆ ರಂಗಸಿರಿ ಗೌರವ ಪ್ರಶಸ್ತಿ ಪ್ರಧಾನ

Published 8 ಮಾರ್ಚ್ 2024, 16:12 IST
Last Updated 8 ಮಾರ್ಚ್ 2024, 16:12 IST
ಅಕ್ಷರ ಗಾತ್ರ

ಮುಳಗುಂದ: ಅಂಧ, ಅನಾಥರ ಬಾಳು ಬೆಳಗಿದ, ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ, ಗದುಗಿನ ಪಂ.ಪುಟ್ಟರಾಜ ಗವಾಯಿಗಳು ರಂಗ ಕಲೆಯನ್ನ ಸ್ವತಃ ಸ್ಥಾಪಿಸಿ, ಕಲೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಎಂದು ಹಿರಿಯ ಗಾಯಕ ರಾಜಗುರು ಗುರುಸ್ವಾಮಿ ಕಲಕೇರಿ ಸ್ಮರಿಸಿದರು.

ಇಲ್ಲಿನ ನಾಟಕ ಕ್ಯಾಂಪ್‌ನಲ್ಲಿ ಗದುಗಿನ ಶ್ರೀ ಕುಮಾರೇಶ್ವರ ಕೃಪಾ ಪೋಷಿತ ಪಂ.ಪಂಚಾಕ್ಷರಿ ಗವಾಯಿಗಳವರ ನಾಟ್ಯ ಸಂಘದ 87ನೇ ವಾರ್ಷಿಕೋತ್ಸವದ ಅಂಗವಾಗಿ, ಗುರುವಾರ ನಡೆದ ರಂಗಸಿರಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರಂತರ 87 ವರ್ಷಗಳಿಂದ ರಂಗ ಕಲೆಯನ್ನು ಉಳಿಸಿ ಬೆಳೆಸಿರುವ ಎಲ್ಲ ಕಲಾವಿದರ ಶ್ರಮ ಶ್ಲಾಘನೀಯ. ಎಂದರು.

ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು, ಹಿರಿಯ ಗಾಯಕ ರಾಜಗುರು ಗುರುಸ್ವಾಮಿ ಕಲಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಆಂಧ್ರ ಪ್ರದೇಶದ ಪಂ.ಮರಿಸ್ವಾಮಿ ಮದರಿ, ಅಡ್ನೂರಿನ ಪಂ ಎಂ.ಕಲ್ಲಿನಾಥ ಶಾಸ್ತ್ರಿ, ಪು.ಬಡ್ನಿಯ ರಾಚಯ್ಯಸ್ವಾಮಿ ಹಿರೇಮಠ, ಕಟಗಿಹಳ್ಳಿಯ ಹುಚ್ಚಯ್ಯಸ್ವಾಮಿ, ಕೌಜಗೇರಿ ಈರಪ್ಪ ಹೂಗಾರ ಅವರಿಗೆ ರಂಗಸಿರಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ, ಶ್ರೀಧರ ಹೆಗಡೆ, ಲಾಲಾಸಾಬ್  ಕಣವಿ, ಡಾ.ಎಸ್.ಸಿ.ಚವಡಿ, ಎಪ್.ಎಂ.ರೊಟ್ಟಿಗವಾಡ, ಅಜಿತ್ ಘೋರ್ಪಡೆ, ರೇವಣಸಿದ್ದಯ್ಯ ಹೊಸೂರ, ನಾಗರತ್ನಾ, ಪ್ರೇಮಾ ಗುಳೇದಗುಡ್ಡ, ವಿ.ಪಿ.ಮಠಪತಿ, ಬಸವರಡ್ಡಿ ಬೆಳಕೊಪ್ಪ, ನಾಟ್ಯ ಸಂಘದ ವ್ಯವಸ್ಥಾಪಕ ಮಹಾದೇವ ಹೊಸೂರ, ಕಾರ್ಯದರ್ಶಿ ನೂರುದ್ದಿನ ಮಂಗಳೂರು, ಮಹಾದೇವ ಗುಟ್ಲಿ ಹಾಗೂ ಕಲಾವಿದರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT