ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯೋದ್ಯಮ ಸಂಸ್ಥೆ: ವಾರ್ಷಿಕ ಸಭೆ

Last Updated 25 ಸೆಪ್ಟೆಂಬರ್ 2020, 16:06 IST
ಅಕ್ಷರ ಗಾತ್ರ

ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಸ್ಥೆಯ ಉಪಾಧ್ಯಕ್ಷಅರವಿಂದ ವಿ.ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸಂಸ್ಥಾಪಕರಾದ ದಿ. ಕುಶಾಲದಾಸ ಜಿ. ಮೆಹ್ತಾ ಅವರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರು ‍ಪುಷ್ಪನಮನ ಸಲ್ಲಿಸಿದರು.

ಸಂಸ್ಥೆಯ ಮಾಜಿ ಅಧ್ಯಕ್ಷ ಅಶೋಕ ಎಸ್.ನಿಲೂಗಲ್ ಮಾತನಾಡಿ, ‘ಕುಶಾಲದಾಸ ಅವರು ವ್ಯಾಪಾರಸ್ಥರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಹುಟ್ಟುಹಾಕಿದರು. 10 ವರ್ಷಗಳ ಕಾಲ ಸಣ್ಣ ಕಟ್ಟಡದಲ್ಲಿ ನಡೆದ ಸಂಸ್ಥೆ ಇಂದು ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದೆ’ ಎಂದು ಹೇಳಿದರು.

ನಂತರದಲ್ಲಿ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಿತು. ಗೌರವ ಕಾರ್ಯದರ್ಶಿ ತಾತನಗೌಡ ಎಸ್.ಪಾಟೀಲ ಕಳೆದ ವರ್ಷದ ವಾರ್ಷಿಕ ವರದಿ ಹಾಗೂ ಒಂದು ವರ್ಷದ ಕಾರ್ಯ ಚಟುವಟಿಕೆಗಳನ್ನು ಮಂಡಿಸಿದರು.

2019-20ನೇ ಸಾಲಿನ ಲೆಕ್ಕ ಪತ್ರ ಹಾಗೂ 2020-2021ನೇ ಸಾಲಿನ ಮುಂಗಡ ಪತ್ರವನ್ನು ಕೋಶಾಧ್ಯಕ್ಷ ಸೋಮನಾಥ ಕೆ. ಜಾಲಿ ಅವರು ಸಭೆಯಲ್ಲಿ ಮಂಡಿಸಿ, ಸರ್ವಾನುಮತದಿಂದ ಒಪ್ಪಿಗೆ ಪಡೆದುಕೊಂಡರು.

ನಂತರ ಮೂರು ವರ್ಷಗಳ ಅವಧಿಗೆ 11 ಜನರ ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಿ, ಎಲ್ಲ ಸಲಹಾ ಸಮಿತಿ ಸದಸ್ಯರ ಪರವಾಗಿ ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಸಭೆಗೆ ಮಂಡಿಸಿ ಒಪ್ಪಿಗೆ ಪಡೆದರು.

ಉಪಾಧ್ಯಕ್ಷ ಜಯದೇವ ಎಂ. ಮೆಣಸಗಿ, ಸಹ ಗೌರವ ಕಾರ್ಯದರ್ಶಿ ಈಶ್ವರಪ್ಪ ಸಿ. ಮುನವಳ್ಳಿ, ನಾಗೇಶ ತಿರಕಪ್ಪ ಹುಬ್ಬಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT