ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತ ಅಭಿವೃದ್ಧಿಪಡಿಸಲು ಆಗ್ರಹ

Published 30 ಜುಲೈ 2023, 15:17 IST
Last Updated 30 ಜುಲೈ 2023, 15:17 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿನ ಚೆನ್ನಮ್ಮನ ವೃತ್ತ ದುರಸ್ತಿಗೆ ಕಾದಿದೆ. ಈ ಹಿಂದೆ ವೃತ್ತದ ಬಳಿ ಇದ್ದ ಬೇವಿನಮರ ಬಿದ್ದು ವೃತ್ತದಲ್ಲಿ ನಿರ್ಮಿಸಲಾದ ಕಟ್ಟಡಕ್ಕೆ ಧಕ್ಕೆ ಆಗಿದೆ. ವೃತ್ತದ ಸುತ್ತಮುತ್ತ ಕಸಕಡ್ಡಿ ತುಂಬಿಕೊಂಡಿದ್ದು, ವೃತ್ತವನ್ನು ಅಭಿವೃದ್ಧಿ ಪಡಿಸಬೇಕು.

ಈ ವೃತ್ತದಲ್ಲಿ ರಾಷ್ಟ್ರೀಯ ಹಬ್ಬಗಳ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಅಲ್ಲದೆ ಕನ್ನಡ ರಾಜ್ಯೋತ್ಸವದಂದು ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಆದರೆ ವೃತ್ತ ಹದಗೆಟ್ಟಿದೆ. ಅಲ್ಲದೆ ಈ ವೃತ್ತ ರಸ್ತೆಗೆ ಹೊಂದಿಕೊಂಡಿದೆ. ಕಾರಣ ಹಾಳಾಗುತ್ತಿರುವ ವೃತ್ತವನ್ನು ಸ್ವಲ್ಪ ಹಿಂದಕ್ಕೆ ಸರಿಸಿ ಕಟ್ಟಬೇಕು, ಅಲ್ಲಿ ಚೆನ್ನಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು’ ಎಂದು ಶಿವಯೋಗೆಪ್ಪ ಚಂದರಗಿ ಹೇಳಿದರು.

ಶಿವಯೋಗೆಪ್ಪ ಚಂದರಗಿ, ನಾಗರಾಜ ಸೂರಣಗಿ, ಪಟ್ಟಣದ ನಿವಾಸಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT