ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಣ | ಮರಳು ದಂಧೆ: ಡೆತ್‌ ನೋಟ್‌ ಬರೆದು ವೈದ್ಯ ಶಶಿಧರ್‌ ಹಟ್ಟಿ ಆತ್ಮಹತ್ಯೆ

Published 13 ಫೆಬ್ರುವರಿ 2024, 16:03 IST
Last Updated 13 ಫೆಬ್ರುವರಿ 2024, 16:03 IST
ಅಕ್ಷರ ಗಾತ್ರ

ರೋಣ (ಗದಗ ಜಿಲ್ಲೆ): ತಾಲ್ಲೂಕಿನ ಹಿರೇಹಾಳ ಗ್ರಾಮದ ಕಾಂಗ್ರೆಸ್‌ ಮುಖಂಡ ಮತ್ತು ವೈದ್ಯ ಶಶಿಧರ್‌ ಹಟ್ಟಿ ಡೆತ್‌ನೋಟ್‌ ಬರೆದಿಟ್ಟು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಮೃತರ ಪತ್ನಿ ಸುನಂದಾ ರೋಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ವೈದ್ಯ ವೃತ್ತಿ ಜೊತೆ ಎಂಟು ವರ್ಷಗಳಿಂದ ಮರಳಿನ ವ್ಯವಹಾರ ನಡೆಸುತ್ತಿದ್ದ ಶಶಿಧರ ಹಟ್ಟಿ ಡೆತ್‌ ನೋಟ್‌ನಲ್ಲಿ ತಮ್ಮ ಸಾವಿಗೆ ಮರಳು ದಂಧೆಕೋರ, ಕಾಂಗ್ರೆಸ್‌ ಮುಖಂಡ ಶರಣಗೌಡ ಪಾಟೀಲ ಕಾರಣವೆಂದು ಬರೆದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಶಶಿಧರ ಹಟ್ಟಿ ಎರಡು ಮೂರು ತಿಂಗಳ ಹಿಂದೆ ರಾಜು ಶಿರಗುಂಪಿ, ಅಶೋಕ ವಾಸವಿ ಶೆಟ್ಟರ, ಶರಣಗೌಡ ಎಲ್‌.ಪಾಟೀಲ ಇನ್ನೂ ಕೆಲವರು ಹೊಳೆಮಣ್ಣೂರಿನಲ್ಲಿ ಮರಳಿನ ಪಾಯಿಂಟ್‌ ಮಾಡಿಕೊಂಡಿದ್ದರು. ಶರಣಗೌಡ ಪಾಟೀಲ ತನಗೆ ಪ್ರತಿದಿನ  ಮರಳಿನ ವ್ಯವಹಾರದ ಲೆಕ್ಕಪತ್ರ ಹಾಗೂ ಹಣವನ್ನು ಕೊಡುವಂತೆ ಒತ್ತಡ ಹೇರುತ್ತ, ಮಾನಸಿಕ ತೊಂದರೆ ಕೊಡುತ್ತಿದ್ದ. ವ್ಯವಹಾರದಲ್ಲಿ ತಾನು ಹಾಕಿದ್ದ ಹಣ ವಾಪಸ್ ನೀಡದೇ ತೊಂದರೆ ಮಾಡುತ್ತಿದ್ದ ಎಂಬ ಅಂಶ ಡೆತ್‌ನೋಟ್‌ನಲ್ಲಿದೆ’ ಎಂದು ಪೊಲೀಸರು ಅವರು ತಿಳಿಸಿದ್ದಾರೆ.

‘ನನ್ನ ಆತ್ಮಹತ್ಯೆಗೆ ಕಾರಣವಾದ ಶರಣಗೌಡ ಅವರಿಗೆ ಶಿಕ್ಷೆ ಕೊಡಿಸಬೇಕು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವ‌ರಿಗೆ ಈ ವಿಷಯ ತಿಳಿಸಿ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT