ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್: ಆಕಸ್ಮಿಕ ಬೆಂಕಿಗೆ ಆರು ಬಣಿವೆಗಳು ಭಸ್ಮ

Published 22 ಡಿಸೆಂಬರ್ 2023, 15:03 IST
Last Updated 22 ಡಿಸೆಂಬರ್ 2023, 15:03 IST
ಅಕ್ಷರ ಗಾತ್ರ

ನರೇಗಲ್: ಪಟ್ಟಣದ ಗಜೇಂದ್ರಗಡ ರಸ್ತೆಯ ಬದಿಯ ಹಿತ್ತಲದಲ್ಲಿ ಹಾಕಲಾಗಿದ್ದ ಆರು ಬಣಿವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಭಸ್ಮವಾದ ಘಟನೆ ಗುರುವಾರ ಜರುಗಿದೆ.

ಸ್ಥಳೀಯರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು ಸಹ ಅಪಾರ ಪ್ರಮಾಣದ ಹೊಟ್ಟು, ಮೇವು ಭಸ್ಮವಾಗಿದೆ. ಮಾಹಿತಿ ತಿಳಿದು ರೋಣ ದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಯವರು ಬೆಂಕಿಯನ್ನು ನಂದಿಸಿದರು ಹಾಗೂ ಇತರೆ ಕಡೆ ಬೆಂಕಿ ಹಬ್ಬುವುದನ್ನು ತಪ್ಪಿಸಿದರು.

ಈ ಆರು ಬಣವೆಗಳಲ್ಲಿ ರೈತ ಮಲ್ಲಪ್ಪ ಗೋಡಿಯವರ 2 ಟ್ರ್ಯಾಕ್ಟರ್ ಜೋಳದ ಮೇವು, 2 ಟ್ರ್ಯಾಕ್ಟರ್‌ನಷ್ಟು ಕಡಲೆ ಹೊಟ್ಟು ಮತ್ತು 2 ಟ್ರ್ಯಾಕ್ಟರ್ ಶೇಂಗಾ ಹೊಟ್ಟು ಇತ್ತು ಅಂದಾಜು ₹ 60 ಸಾವಿರ ಹಾನಿಯಾಗಿದೆ. ಇನ್ನೊಬ್ಬ ರೈತ ಬಸಪ್ಪ ನೀಲಪ್ಪ ಗೋಡಿಯವರ 2 ಟ್ರಾಕ್ಟರ್ ಜೋಳದ ಮೇವು, 2 ಟ್ರಾಕ್ಟರ್ ಕಡಲೆ ಹೊಟ್ಟು ಮತ್ತು 5 ಟ್ರಾಕ್ಟರ್ ಶೇಂಗಾ ಹೊಟ್ಟು ಹಾಕಲಾಗಿತ್ತು ಅಂದಾಜು ₹ 1 ಲಕ್ಷ ಹಾನಿಯಾಗಿದೆ.

ಹನುಮಪ್ಪ ನಿಂಗಪ್ಪ ಗೋಡಿ ಇವರಿಗೆ ಸೇರಿದ 2 ಟ್ರಾಕ್ಟರ್ ಜೋಳದ ಮೇವು, 2 ಟ್ರಾಕ್ಟರ್ ಕಡಲೆ ಹೊಟ್ಟು ಮತ್ತು 4 ಟ್ರ್ಯಾಕ್ಟರ್ ಶೇಂಗಾ ಹೊಟ್ಟು ಇತ್ತು. ಅಂದಾಜು ₹ 90 ಸಾವಿರ ಹಾನಿಯಾಗಿದೆ ಎಂದು ರೈತರು ಹೇಳಿಕೊಂಡರು.

ಈ ವೇಳೆ ಅಗ್ನಿ ಶಾಮಕ ದಳದ ಆರ್.ಎಸ್.ನಕ್ಕರಗೊಂದಿ, ಸಂತೋಷ ತೋಟದ, ನಿಂಗನಗೌಡ ಅಳಗವಾಡಿ, ಹನುಮಂತ ಕಟ್ಟಿಮನಿ, ರಾಜೇಶ ಮಲ್ಲಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT