ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲುಮತ ಸಮಾಜ ಒಗ್ಗಟ್ಟಿನಿಂದ ಇರಲಿ: ಮಾಜಿ ಶಾಸಕ ಗಡ್ಡದೇವರಮಠ

Published 2 ಜೂನ್ 2024, 14:03 IST
Last Updated 2 ಜೂನ್ 2024, 14:03 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಹಾಲುಮತ ಸಮಾಜ ಒಗ್ಗಟ್ಟಿನಿಂದ ಇರಬೇಕು. ಇಂದು ಕುರುಬರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹಿಸಿದ್ದು ಶ್ಲಾಘನೀಯ. ಸಂಘಟನೆಯೊಂದಿಗೆ ರಚನಾತ್ಮಕ ಕೆಲಸಗಳನ್ನು ಮಾಡಬೇಕು. ಇಂದಿನದು ಸ್ಪರ್ಧಾತ್ಮಕ ಜಗತ್ತು. ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಅದನ್ನು ಶಿಕ್ಷಣದಿಂದ ಮಾತ್ರ ಎದುರಿಸಲು ಸಾಧ್ಯ ಎಂಬುದನ್ನು ಮರೆಯಬಾರದು’ ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದಿಂದ ಪಟ್ಟಣದ ಚನ್ನಮ್ಮನ ವನದಲ್ಲಿ ಭಾನುವಾರ ಆಯೋಜಿಸಿದ್ದ ಹಾಲುಮತ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಹಿಳೆಯಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಅವರ ಜವಾಬ್ದಾರಿ ಬಹಳ ದೊಡ್ಡದು. ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ ನೀಡಬೇಕು. ಬಡ ಮಕ್ಕಳ ಶಿಕ್ಷಣಕ್ಕೆ ಸಮಾಜ ಸ್ಪಂದಿಸಬೇಕು’ ಎಂದು ಹೇಳಿದರು.

ಧಾರವಾಡದ ಮನ್ಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಮಾತನಾಡಿ, ‘ಇಂದು ಶಿಕ್ಷಣಕ್ಕೆ ಬಹಳಷ್ಟು ಬೆಲೆ ಇದೆ. ಕಾರಣ ಹಾಲುಮತ ಸಮಾಜದವರು ಮಕ್ಕಳನ್ನು ಕುರಿ ಕಾಯಲು ಬಿಡದೆ ಅವರಿಗೆ ವಿದ್ಯೆ ಕೊಡಿಸಬೇಕು. ಜೀವನದಲ್ಲಿ ಎಷ್ಟೇ ಕಷ್ಟ ಎದುರಾದರೂ ಪಾಲಕರು ಸಹಿಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ವಿದ್ಯೆ ಇದ್ದವನಿಗೆ ಮಾತ್ರ ಈ ಜಗತ್ತಿನಲ್ಲಿ ಬೆಲೆ ಎಂಬುದನ್ನು ಮರೆಯಬಾರದು’ ಎಂದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶೇಕಣ್ಣ ಕಾಳೆ ಅಧ್ಯಕ್ಷತೆ ವಹಿಸಿದ್ದರು. ಹುಲ್ಲೂರು ಅಮೋಘಿಮಠದ ಶ್ರೀಗಳು, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವಿ.ಜಿ. ಪಡಿಗೇರಿ ಮಾತನಾಡಿದರು. ಪ್ರೊ.ಮಂಜುನಾಥ ಕೊಕ್ಕರಗುಂದಿ ಉಪನ್ಯಾಸ ನೀಡಿದರು.

ಗಂಗಮ್ಮ ಗದ್ದಿ, ಶಿವಣ್ಣ ಕುರಿ, ನಿಂಗನಗೌಡ ಹೊಸಗೌಡ್ರ, ಯಲ್ಲಮ್ಮ ದುರ್ಗಣ್ಣವರ, ಭಾಗ್ಯಶ್ರೀ ಬಾಬಣ್ಣ, ಅಮರಪ್ಪ ಗುಡಗುಂಟಿ, ಛಾಯಪ್ಪ ಬಸಾಪುರ, ವೀರೇಂದ್ರಗೌಡ ಪಾಟೀಲ, ಮುದಕಣ್ಣ ಗದ್ದಿ, ಕವಿತಾ ಶೆರಸೂರಿ, ಗಂಗಮ್ಮ ಗದ್ದಿ, ಫಕ್ಕೀರೇಶ ಮ್ಯಾಟಣ್ಣವರ, ಎಚ್.ಎನ್. ಕೆರೂರ, ನೀಲಪ್ಪ ಶೆರಸೂರಿ, ಹರೀಶ ಲಕ್ಷ್ಮೇಶ್ವರ, ಬಸಣ್ಣ ಹೊಳಲಾಪುರ, ಹಾಲಪ್ಪ ಹಳ್ಳಿಕೇರಿ, ತಿಪ್ಪಣ್ಣ ಸಂಶಿ, ಬಿ.ಎನ್. ಸಂಶಿ, ಗವಿಸಿದ್ದಯ್ಯ ಹಳ್ಳಿಕೇರಿ, ಮಂಜುನಾಥ ಘಂಟಿ ಇದ್ದರು.

ಪಲ್ಲವಿ ಚಾಕಲಬ್ಬಿ ಭರತ ನಾಟ್ಯ. ಪ್ರದರ್ಶಿಸಿದರು. ಯಲ್ಲಪ್ಪ ಸೂರಣಗಿ ಸ್ವಾಗತಿಸಿದರು. ಸುಭಾಷ ತಾಯಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎನ್.ಎನ್. ಸಾವಿರಕುರಿ ನಿರೂಪಿಸಿದರು. ಬಸವರಾಜ ಯರಗುಪ್ಪಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT