ಭಾನುವಾರ, 8 ಮಾರ್ಚ್ 2026
×
ADVERTISEMENT

ಗದಗ| ನಗರಸಭೆ ಗದ್ದುಗೆ ಗುದ್ದಾಟ: ಕಾಂಗ್ರೆಸ್‌ಗೆ ಮೇಲುಗೈ

ಪ್ರಾದೇಶಿಕ ಆಯುಕ್ತರ ಆದೇಶ ಎತ್ತಿ ಹಿಡಿದ ಧಾರವಾಡ ಹೈಕೋರ್ಟ್‌ ಪೀಠ: ಮತ್ತೇ ಕಾನೂನು ಹೋರಾಟಕ್ಕೆ ಬಿಜೆಪಿ ಸಜ್ಜು
ಕೆ.ಎಂ.ಸತೀಶ್‌ ಬೆಳ್ಳಕ್ಕಿ
Published : 11 ಫೆಬ್ರುವರಿ 2026, 4:35 IST
Last Updated : 11 ಫೆಬ್ರುವರಿ 2026, 4:35 IST
ADVERTISEMENT
ಫಾಲೋ ಮಾಡಿ
Comments
ಚಂದ್ರು ತಡಸದ
ಚಂದ್ರು ತಡಸದ
ಬಿಜೆಪಿ ಸದಸ್ಯರ ನಗರಸಭೆ ಸದಸ್ಯತ್ವ ಅನರ್ಹತೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಆದೇಶದ ಪ್ರತಿ ಇನ್ನೂ ಕೈಸೇರಿಲ್ಲ. ಕೋರ್ಟ್‌ ಸೂಚನೆಯಂತೆ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.
ಗಂಗಪ್ಪ ಎಂ. ಉಪವಿಭಾಗಾಧಿಕಾರಿ
ನಮಗೆ ಕಾನೂನಿನ ಬಾಗಿಲು ಇನ್ನೂ ಮುಚ್ಚಿಲ್ಲ
ಚಂದ್ರು ತಡಸದ ‘ಬೆಳಗಾವಿ ಪ್ರಾದೇಶಿಕ ಆಯುಕ್ತರು ನೀಡಿದ್ದ ನಗರಸಭೆ ಸದಸ್ಯತ್ವ ಅನರ್ಹತೆ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಪೀಠ ವಜಾಗೊಳಿಸಿದೆ. ಆದರೆ ನಮ್ಮ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ಪಕ್ಷದ ಹಿರಿಯರು ಕಾನೂನು ತಜ್ಞರ ಜತೆಗೆ ಚರ್ಚಿಸಿ ಹೋರಾಟ ಮುಂದುವರಿಸುತ್ತೇವೆ. ಕಾನೂನಿನ ಬಾಗಿಲು ನಮಗೆ ಇನ್ನೂ ಮುಚ್ಚಿಲ್ಲ’ ಎಂದು ನಗರಸಭೆ ಸದಸ್ಯ ಚಂದ್ರು ತಡಸದ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ತೀರ್ಪು ಬಂದರೆ ಏನು ಮಾಡಬೇಕು ಎಂದು ಮೊದಲೇ ಯೋಚಿಸಿದ್ದೇವು. ಅದರಂತೆ ಹೈಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಮತ್ತೇ ಅರ್ಜಿ ಸಲ್ಲಿಸುತ್ತೇವೆ’ ಎಂದು ತಿಳಿಸಿದರು. ‘ಹೈಕೋರ್ಟ್‌ ಪೀಠ ಮಂಗಳವಾರ ನೀಡಿದ ಆದೇಶದ ಪ್ರಕಾರ ಹಿಂದೆ ನಡೆದಿರುವ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಊರ್ಜಿತ ಆಗುವುದಿಲ್ಲ. ಹಾಗಾಗಿ ಕೊನೆ ಹಂತದವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ತಿಳಿಸಿದರು.
ಸಂಖ್ಯಾಬಲ ಕುಸಿತ
ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ 18 ಸಂಖ್ಯಾಬಲ ಹೊಂದಿತ್ತು. ಇಬ್ಬರು ಪಕ್ಷೇತರರ ಜತೆಗೂಡಿ ಕಾಂಗ್ರೆಸ್‌ಗೆ 17 ಮಂದಿಯ ಸದಸ್ಯ ಬಲ ಇತ್ತು. ನಕಲಿ ಠರಾವು ಸೃಷ್ಟಿಸಿದ ಆರೋಪ ಮೇಲೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೂವರು ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದ್ದರಿಂದ ಬಿಜೆಪಿಯ ಬಲ 15ಕ್ಕೆ ಕುಸಿದಿತ್ತು. ಈಗ ಹೈಕೋರ್ಟ್‌ ಆದೇಶ ಕೂಡ ಅದನ್ನು ಎತ್ತಿಹಿಡಿದಿದ್ದು ನಗರಸಭೆ ಗದ್ದುಗೆ ಹಿಡಿಯಬೇಕು ಎಂಬ ಅವರ ಕನಸಿಗೆ ಸದ್ಯಕ್ಕೆ ತಡೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT