ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ | ಹೋಳಿ, ರಂಜಾನ್ ಹಬ್ಬ: ಶಾಂತಿ ಸಭೆ

Published 20 ಮಾರ್ಚ್ 2024, 15:11 IST
Last Updated 20 ಮಾರ್ಚ್ 2024, 15:11 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಹೋಳಿ ಹುಣ್ಣಿಮೆ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು.

ಪೂರ್ಣಾಜಿ ಖರಾಟೆ ಸಭೆ ಉದ್ಧೇಶಿಸಿ ಮಾತನಾಡಿ, ‘ಹಿಂದಿನಿಂದಲೂ ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಎಲ್ಲ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ಧತೆಯಿಂದ ನಡೆಸಿಕೊಂಡು ಬರುತ್ತಿದ್ದೇವೆ. ರಂಗಪಂಚಮಿಯಂದು ರಾಸಾಯನಿಕ ಬಣ್ಣ ಬಳಸದೆ ಒಣ ಬಣ್ಣ ಬಳಸುವುದು ಸೂಕ್ತ. ಈ ನಿಟ್ಟಿನಲ್ಲಿ ಪುರಸಭೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದರು. 

‘ಶಿಗ್ಲಿ ಕ್ರಾಸ್‍ನಲ್ಲಿ ಯಾವಾಗಲೂ ವಾಹನದಟ್ಟಣೆ ಇರುತ್ತದೆ. ಟ್ರಾಪಿಕ್ ಸಿಗ್ನಲ್‍ಗಳನ್ನು ಅಳವಡಿಸಬೇಕು. ಕ್ರಾಸ್‍ನಲ್ಲಿ ಅಳವಡಿಸಿರುವ ಥರ್ಡ್ ಐ ಕ್ಯಾಮೆರಾದಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ಅದನ್ನು ಅಲ್ಲಿಂದ ತೆರವುಗೊಳಿಸಬೇಕು’ ಎಂದೂ ಮನವಿ ಮಾಡಿದರು.

ಪಿಎಸ್‍ಐ ಈರಪ್ಪ ರಿತ್ತಿ ಮಾತನಾಡಿ ‘ಹಬ್ಬದ ನೆಪದಲ್ಲಿ ಕಾನೂನು ಮೀರುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಹೋಳಿ ಹುಣ್ಣಿಮೆ ಮತ್ತು ರಂಜಾನ್ ಹಬ್ಬಗಳನ್ನು ಎಲ್ಲರೂ ಸೇರಿ ಶಾಂತ ರೀತಿಯಿಂದ ಆಚರಿಸಬೇಕು’ ಎಂದು ಹೇಳಿದರು.

‘ಈಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಅಪರಿಚಿತರು ಪಾಸ್‍ವರ್ಡ್ ಮತ್ತು ಒಟಿಪಿ ಕೇಳಿದಾಗ ಹಂಚಿಕೊಳ್ಳಬಾರದು. ಫೇಸ್‍ಬುಕ್ ಮತ್ತು ವಾಟ್ಸ್‌ಆ್ಯಪ್‌ಗಳಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ವಿಷಯಗಳನ್ನು ಪೋಸ್ಟ್ ಮಾಡಬಾರದು. ಎಚ್ಚರಿಕೆ ವಹಿಸಬೇಕು’ ಎಂದರು.

ಗಂಗಾಧರ ಮೆಣಸಿನಕಾಯಿ, ಶಿವಣ್ಣ ಕಟಗಿ, ನಜೀರ್ ಗದಗ, ಇಸ್ಮಾಯಿಕ್ ಆಡೂರ ಮಾತನಾಡಿದರು.

ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ, ಮಹೇಶ ಕಲಘಟಗಿ, ಸುಲೇಮಾನ್ಸಾಬ್ ಕಣಕೆ, ಭೀಮಣ್ಣ ಯಂಗಾಡಿ, ನಾಗರಾಜ ಹಾವಳಕೇರಿ, ಚಂದ್ರು ಹಂಪಣ್ಣವರ, ಸದಾನಂದ ನಂದೆಣ್ಣವರ ಮತ್ತಿತರರು ಇದ್ದರು. ಮಾರುತಿ ಲಮಾಣಿ ಮತ್ತು ಸೀಗೀಹಳ್ಳಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT