ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌: ಪ್ರಧಾನಿ ಮೋದಿ ಶ್ವೇತಪತ್ರ ಹೊರಡಿಸಲಿ– ಎಚ್‌ಕೆ ಆಗ್ರಹ

Published 30 ಮಾರ್ಚ್ 2024, 16:07 IST
Last Updated 30 ಮಾರ್ಚ್ 2024, 16:07 IST
ಅಕ್ಷರ ಗಾತ್ರ

ಗದಗ: ‘ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಷ್ಟೇ ತೊಡಗಿಸಿಕೊಂಡಿಲ್ಲ. ಚುನಾವಣಾ ಬಾಂಡ್‌ ವಿಚಾರದಲ್ಲಿ ಹಲವರನ್ನು ಶೋಷಣೆ ಮಾಡಿ ಅವರಿಂದ ಹಣ ಪಡೆದಿದೆ. ಜಾಗತಿಕ ಮಟ್ಟದಲ್ಲಿ ಇದು ಅತ್ಯಂತ ದೊಡ್ಡ ಹಗರಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಆರೋಪಿಸಿದರು.

‘ಭ್ರಷ್ಟಾಚಾರದ ಮುಂದಿನ ಹಂತವೇ ಹಿಂಸಾತ್ಮಕ ಶೋಷಣೆ. ದೇಣಿಗೆ ಪಡೆಯಲು ಇಂತಹ ಮಾರ್ಗ ಅನುಸರಿಸಿರುವ ರಾಜಕೀಯ ಪಕ್ಷ ಜಗತ್ತಿನಲ್ಲಿ ಎಲ್ಲೂ ಇಲ್ಲ. ಚುನಾವಣಾ ಬಾಂಡ್‌ ವಿಷಯದಲ್ಲಿ ಪ್ರಧಾನಿ ಮೋದಿ ಅವರ ಸುತ್ತ ಆರೋಪದ ಮೋಡಗಳು ಕವಿದಿವೆ. ಅದಕ್ಕೆ ಚುನಾವಣಾ ಬಾಂಡ್‌ ಮತ್ತು ರಾಜಕೀಯ ಪಕ್ಷಗಳಿಗೆ ಬಂದಿರುವ ಹಣದ ಬಗ್ಗೆ ಚುನಾವಣೆಗೂ ಮುನ್ನ ಶ್ವೇತಪತ್ರ ಹೊರಡಿಸಬೇಕು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಚುನಾವಣಾ ಬಾಂಡ್‌ಗಳ ಮೂಲಕ ಅಧಿಕೃತವಾಗಿಯೇ ಇಷ್ಟು ಹಣ ಪಡೆದಿದ್ದು ಒಂದೆಡೆಯಾದರೆ, ಖಾಸಗಿಯಾಗಿ ಎಷ್ಟು ಪಡೆದಿರಬಹುದು? ಇದರಲ್ಲಿ ಕಪ್ಪುಹಣ ಎಷ್ಟಿರಬಹುದು? ಎಂದು ಜನರು ಯೋಚಿಸುತ್ತಿದ್ದಾರೆ. ಯಾರೆಲ್ಲ ದೊಡ್ಡ ಕುಳಗಳು ಚುನಾವಣಾ ಬಾಂಡ್‌ ಖರೀದಿಸಿದ್ದಾರೆ? ಖರೀದಿಗೂ ಮುನ್ನ ಅವರ ಮೇಲೆ ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಐಟಿ ಪ್ರಕರಣಗಳು ಎಷ್ಟಿದ್ದವು? ಈ ಅಂಶಗಳನ್ನು ಮೊದಲು ಗುರುತಿಸಬೇಕು. ಚುನಾವಣಾ ಬಾಂಡ್‌ ಖರೀದಿಸಿದ ಬಳಿಕ ಅವರ ವಿರುದ್ಧ ಇದ್ದ ಪ್ರಕರಣಗಳ ತನಿಖೆ ಸ್ಥಗಿತಗೊಂಡಿದ್ದರೆ ಅಥವಾ ಪೂರ್ಣಗೊಂಡಿದ್ದರೆ ಅದರ ಮಾಹಿತಿಯನ್ನು ಜನರಿಗೆ ಒದಗಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT