ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷಕ್ಕೆ ಒಳಗಾಗದೆ ಮತ ನೀಡಿ: ವಿಜಯಮಹಾಂತ ಸ್ವಾಮೀಜಿ

Published 1 ಮೇ 2024, 14:06 IST
Last Updated 1 ಮೇ 2024, 14:06 IST
ಅಕ್ಷರ ಗಾತ್ರ

ಗಜೇಂದ್ರಗಡ: ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಸಾಂವಿಧಾನಿಕವಾಗಿ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಜನಪ್ರತಿನಿಧಿಗಳ ಪಾತ್ರವೂ ಮುಖ್ಯವಾಗಿರುತ್ತದೆ. ಆ ಜನಪ್ರತಿನಿಧಿಗಳು ಹೇಗಿರಬೇಕು ಎಂಬುದನ್ನು ನಾವು ನಿರ್ಣಯಿಸಬೇಕು. ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅಂತಹ ಉತ್ತಮ ಜನಪ್ರತಿನಿಧಿಗಳ ಆಯ್ಕೆ ನಮ್ಮೆಲ್ಲರದಾಗಿರಬೇಕು.

ಜೀವನಕ್ಕೆ ಅಗತ್ಯ ವಸ್ತು ಖರೀದಿಯಲ್ಲಿ ನಾವು ಹೇಗೆ ಜಾಗೃತಿ ವಹಿಸುತ್ತಿವೆಯೋ ಅದೇ ರೀತಿಯಲ್ಲಿ ಜನಪ್ರತಿನಿಧಿ ಆಯ್ಕೆ ಕೂಡ ಉತ್ತಮವಾಗಿರಬೇಕು. ಆ ಆಯ್ಕೆಯು ಒಂದೇ ಆಗಿರಬೇಕು. ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡುವುದೇ ಸವಾಲು ಆಗಿರುತ್ತದೆ. ಮತದಾರ ಯಾವುದೋ ಆಮಿಷಕ್ಕೆ ಒಳಗಾದರೆ ಇಡೀ ಸಮಾಜ ತೊಂದರೆ ಅನುಭವಿಸಬೇಕಾಗುತ್ತದೆ. ಒಂದು ಮತ ಅಭ್ಯರ್ಥಿಯ ಆಯ್ಕೆಯನ್ನೂ ನಿರ್ಣಯಿಸುತ್ತದೆ. ಪ್ರತಿ ಮತ ಕೂಡ ಮೌಲ್ಯಯುತ ಆಗಿರುತ್ತದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮತ ಚಲಾವಣೆ ಮಾಡುವ ಮೂಲಕ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು.

-ವಿಜಯಮಹಾಂತ ಸ್ವಾಮೀಜಿ, ಮೈಸೂರು ಸಂಸ್ಥಾನ ಮಠ, ಕುದರಿಮೋತಿ-ಗಜೇಂದ್ರಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT