ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಲ್ ಪಾವತಿಸದ ಸರ್ಕಾರ: ಆಕ್ರೋಶ

ಗುತ್ತಿಗೆದಾರರಿಂದ ಆತ್ಮಹತ್ಯೆ ಅಣಕು ಪ್ರದರ್ಶನ
Published 21 ಮಾರ್ಚ್ 2024, 16:16 IST
Last Updated 21 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ನರಗುಂದ: ಸಣ್ಣ ಗುತ್ತಿಗೆದಾರರು ವಿವಿಧ ಇಲಾಖೆಯಲ್ಲಿ ಸ್ವಂತ ಹಣ ಹಾಕಿ ತಾಲ್ಲೂಕಿನಲ್ಲಿ ವಿವಿಧ ಕಾಮಗಾರಿ ಮಾಡಿದ್ದೇವೆ. ಇಲ್ಲಿಯವರೆಗೂ ಕಾಮಗಾರಿ ಮಾಡಿದ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಸಂಕಷ್ಟದಲ್ಲಿರುವ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಾಲ್ಲೂಕಿನ ಸಣ್ಣ ಗುತ್ತಿಗೆದಾರರು ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆತ್ಮಹತ್ಯೆ ಅಣಕು ಪ್ರದರ್ಶನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು‌.

ಸಣ್ಣ ಗುತ್ತಿಗೆದಾರರ ಮುಖಂಡ ಪರಪ್ಪ ಸಾಹುಕಾರ, ನಾವು ಜೀವನ ನಡೆಸದಂತಹ ಪರಿಸ್ಥಿತಿಯಲ್ಲಿದ್ದೇವೆ. 2023-23ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿಯಡಿ ₹ 10 ಕೋಟಿ, ನೀರಾವರಿ ನಿಗಮದಲ್ಲಿ ₹10 ಕೋಟಿಯನ್ನು ಸ್ವಂತವಾಗಿ ಭರಿಸಿ ಕಾಮಗಾರಿ ಮುಗಿಸಿದ್ದೇವೆ. ಅದರ ಹಣ ಬಿಡುಗಡೆಯಾಗಿಲ್ಲ. ಹೀಗಾದರೆ ಗುತ್ತಿಗೆದಾರರ ಸ್ಥಿತಿ ಏನಾಗಬಾರದು? ಎಂದು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಲ್ ಬಿಡುಗಡೆ ಮಾಡುವಂತೆ ಜಿಲ್ಲಾ ಪಂಚಾಯಿತಿಗೆ, ಸರ್ಕಾರಕ್ಕೆ ಹಲವಾರು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸರ್ಕಾರ ಬೇಗ ಎಚ್ಚೆತ್ತುಕೊಂಡು ಸಣ್ಣ ಗುತ್ತಿಗೆದಾರರ ಬಿಲ್ ಪಾವತಿ ಮಾಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಣ್ಣ ಗುತ್ತಿಗೆದಾರರಾದ ಸುರೇಶ ಹುಡೇದಮನಿ, ಬಸನಗೌಡ ಪಾಟೀಲ, ರಾಜು ಪಾಟೀಲ, ಭೀಮಶಿ ಯಾವಗಲ್, ಶಶಿ ನೆಗಳೂರ, ಗೋಪಾಲ ಹೊರಕೇರಿ, ಹನಮಂತಗೌಡ ಪಾಟೀಲ, ಈರನಗೌಡ ಬೆಳ್ಳೇರಿ, ರಮೇಶ ಕಾಳೆ, ಪ್ರವೀಣ ಯಲಿಗಾರ, ಶಿವು ಚಲವಾದಿ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT