ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಮೋದಿ ಕೊಡುಗೆ ಅಪಾರ: ಪಾಟೀಲ

Published 27 ಏಪ್ರಿಲ್ 2024, 16:13 IST
Last Updated 27 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ನರಗುಂದ: ‘ಬಿಜೆಪಿಯ 10 ವರ್ಷದ ಆಡಳಿತದಲ್ಲಿ ಭಾರತೀಯರು ಮೆಚ್ಚುವಂತಹ ಆಡಳಿತವನ್ನು ಪ್ರಧಾನಿ ಮೋದಿ ನೀಡಿದ್ದಾರೆ. 370 ಕಲಂ ರದ್ದುಗೊಳಿಸಿ, ಭಾರತದ ಏಕತೆಯನ್ನು ಗಟ್ಟಿಗೊಳಿಸಿದ್ದಾರೆ. ಭಾರತವನ್ನು ವಿಶ್ವಗುರುವನ್ನಾಗಿಸಲು ಪ್ರಧಾನಿ ಮೋದಿ ಕೊಡುಗೆ ಅಪಾರ’ ಎಂದು ಸಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ಸೋಮಾಪೂರ ಓಣಿ ಹಾಗೂ ಕೆಂಪಗಸಿ ಹತ್ತಿರದಲ್ಲಿ ವಾರ್ಡ್‌ ನಂ.5,6,8,9,17,18 ರಲ್ಲಿ ಶನಿವಾರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಐದು ಶತಮಾನಗಳ ಹೋರಾಟದ ನಂತರ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣಗೊಂಡಿದೆ. ಹಿಂದೂ ಸಮಾಜದ ಗೌರವವನ್ನು ಪ್ರಧಾನಿ ಮೋದಿ ಅವರು ಎತ್ತಿ ಹಿಡಿದಿದ್ದಾರೆ. ಬಹಳ ವರ್ಷಗಳಿಂದ ಕಗ್ಗಂಟಾಗಿದ್ದ ಅನೇಕ ಸಮಸ್ಯೆಗಳು ಮೋದಿ ಆಡಳಿತದಲ್ಲಿ ಬಗೆಹರಿದಿವೆ. ಹೊರವಲಯದ ರಾಷ್ಟ್ರೀಯ ಹೆದ್ದಾರಿ 218 ರ ಬೈಪಾಸ್ ರಸ್ತೆ ಸಂಪೂರ್ಣ ಕೇಂದ್ರ ಸರ್ಕಾರದ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ’ ಎಂದರು.

‘ಹೊಳೆಆಲೂರ ಹತ್ತಿರದ ಮಲಪ್ರಭಾ ನದಿ ಸೇತುವೆ ನಿರ್ಮಾಣವನ್ನು ₹25 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ . ಪ್ರಧಾನಿ ಮೋದಿ ಅವರ ಆಡಳಿತದ ಅವಧಿಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ಅವರು ಎಲೆಮರೆ ಕಾಯಿಯಂತೆ ಸಾಕಷ್ಟು ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಆದ್ದರಿಂದ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ’ ಎಂದು ಅವರು ಹೇಳಿದರು.

ಸಭೆಯಲ್ಲಿ ಪುರಸಭೆ ಸದಸ್ಯರಾದ ಚಂದ್ರಗೌಡ ಪಾಟೀಲ, ಪ್ರಕಾಶ ಹಾದಿಮನಿ, ಕವಿತಾ ಅರ್ಬಾಣದ, ರಾಚನಗೌಡ ಪಾಟೀಲ, ಅಜ್ಜನಗೌಡ ಪಾಟೀಲ, ಎಸ್ ಆರ್ ಪಾಟೀಲ, ಎಸ್.ಜಿ.ಮುತ್ತವಾಡ, ಸಂಭಾಜಿ ಕಾಶೀದ, ಚಂದ್ರಶೇಖರ ಕೋಟಿ, ಸಿದ್ದಪ್ಪ ಎಲಿಗಾರ, ವಸಂತ ಜೋಗಣ್ಣವರ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT