ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ ಅಂಗವಾಗಿ ಶಾಂತಿ ಯಾತ್ರೆ

Published 10 ಮಾರ್ಚ್ 2024, 14:23 IST
Last Updated 10 ಮಾರ್ಚ್ 2024, 14:23 IST
ಅಕ್ಷರ ಗಾತ್ರ

ಸೊರಟೂರ (ಮುಳಗುಂದ): ಇಲ್ಲಿನ ಸರ್ವಧರ್ಮ ಸಮನ್ವಯ ವೇದಿಕೆ, ಶಿವಧ್ಯಾನ ಕೇಂದ್ರದ ಸಹಯೋಗದಲ್ಲಿ ಮಹಾಶಿವರಾತ್ರಿ, ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಶಾಂತಿಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಶಿವಲಿಂಗ ಭಾವಚಿತ್ರ ಹಾಗೂ ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಧ್ಯಾನ ಕೇಂದ್ರದಿಂದ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿತು.

ಶಾಂತಿಯಾತ್ರೆ ನೇತೃತ್ವ ವಹಿಸಿದ್ದ ಧ್ಯಾನ ಕೇಂದ್ರದ ಸಂಯೋಜಕ ಬಿ.ಕೆ.ರೇಣುಕಾ ಮಾತನಾಡಿ, ದಿನದ ಕೆಲವು ಹೊತ್ತು ಯೋಗ, ಶಿವಧ್ಯಾನ ಮಾಡುವುದರಿಂದ ನಿತ್ಯ ಬದುಕಿನಲ್ಲಿ ಒತ್ತಡ ಮುಕ್ತರಾಗಿರಲು ಸಾಧ್ಯವಿದೆ. ಪ್ರತಿಯೊಬ್ಬರು ಧ್ಯಾನ ಮಂದಿರಕ್ಕೆ ಭೇಟಿ ನೀಡಿ, ಆಧ್ಯಾತ್ಮಿಕ ಚಿಂತನೆಯಲ್ಲಿ ಭಾಗವಹಿಸಿ. ಎಂದು ಹೇಳಿದರು.

ಎಪಿಎಂಸಿ ಮಾಜಿ ಸದಸ್ಯ ಶಿವಾನಂದ ಮಾದಣ್ಣವರ ಶಾಂತಿಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರುದ್ರೇಶ ಇನಾಮತಿ, ಶಿಕ್ಷಕರಾದ ಶರಣಪ್ಪ ಕಲಾಲ, ಶಿವಾನಂದ ಮಾಯಪ್ಪನವರ,       ಬಿ.ಎಸ್.ಗುಡಿ, ನಿಂಗಪ್ಪ ಮಾದಣ್ಣವರ, ಅರುಣ್ ಗೋಡಿಹಾಳ, ಮೌನೇಶ ಮರಾಠೆ, ಬಸವರಾಜ ಹಡಪದ, ಬಸವರಾಜ ಜಾಮದಾರ, ದಾವಲಸಾಬ್ ಅತ್ತಿಕಟ್ಟಿ, ದೇವಕ್ಕ ಮಾದಣ್ಣವರ, ಮಲ್ಲಮ್ಮ ಚಾಕಲಬ್ಬಿ, ಶೈಲಜಾ ಪೂಜಾರ, ರಾಜೇಶ್ವರಿ ಮೆಣಸಿನಕಾಯಿ, ವಿಜಯಲಕ್ಷ್ಮಿ ಉಪ್ಪಾರ ಮೊದಲಾದವರು ಭಾಗವಹಿಸಿದ್ದರು.

ಕರಾಟೆ ಪಟುಗಳ ಪಥಸಂಚಲನ ಮತ್ತು ಕರಾಟೆ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT