ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೋಕ ಜ್ಞಾನಕ್ಕೆ ಪ್ರವಾಸ ಅವಶ್ಯ’

Published 30 ಮಾರ್ಚ್ 2024, 16:08 IST
Last Updated 30 ಮಾರ್ಚ್ 2024, 16:08 IST
ಅಕ್ಷರ ಗಾತ್ರ

ನರೇಗಲ್: ನಮ್ಮ ಹಿರಿಯರು ದೇಶ ಸುತ್ತು, ಕೋಶ ಓದು ಎಂದು ಹೇಳಿರುವುದರಲ್ಲಿ ಅರ್ಥವಿದೆ. ನಾವು ಲೋಕ ಜ್ಞಾನ ಪಡೆಯಬೇಕೆಂದರೆ ಪ್ರವಾಸ ಅವಶ್ಯಕವಾಗಿದೆ ಎಂದು ನರೇಗಲ್ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ ಹೇಳಿದರು.

ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಈಚೆಗೆ ಜರುಗಿದ ಬೀಚಿ ಬಳಗದ ಮಾಸಿಕ ಸಭೆಯಲ್ಲಿ ಪ್ರವಾಸ ಕಥನದ ಕುರಿತು ಉಪನ್ಯಾಸ ನೀಡಿದರು.

ನಾವು ಪ್ರವಾಸ ಕೈಗೊಂಡಾಗ ಎಂಟು ಜ್ಯೋತಿರ್ಲಿಂಗ ಹಾಗೂ ಅನೇಕ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ನೋಡಿದೇವು. ಅಲ್ಲಿಗೆ ಹೋದಾಗ ಆಯಾ ಸ್ಥಳಗಳ ಇತಿಹಾಸ, ಪವಾಡ, ಸಂಸ್ಕೃತಿ ಹಾಗೂ ಸಂಪ್ರದಾಯಗಳು ತಿಳಿದುಬಂದಿತು ಎಂದರು.

ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ಪ್ರವಾಸದ ಅನುಭವಗಳನ್ನು ಅನುಭವಿಸಿದವರಿಗೆ ಅದರ ಸವಿ ಏನೆಂಬುದು ಗೊತ್ತು. ನಮ್ಮ ಬೀಚಿ ಬಳಗದ ಮೂಲ ಉದ್ದೇಶದ ಪ್ರಕಾರ ಸದಸ್ಯರು ಪುಸ್ತಕವನ್ನೋದಿ ಅದರ ಬಗ್ಗೆ ಮಾತನಾಡುವ ಕಾರ್ಯ ಮತ್ತೆ ಮುಂದುವರೆಯಬೇಕು ಎಂದರು.

ಕೆ.ಎಸ್. ಕಳಕಣ್ಣವರ ಮಾತನಾಡಿ, ಮುಂದಿನ ಸಭೆಯೊಳಗೆ ದಶಮಾನೋತ್ಸವದ ಸ್ಮರಣ ಸಂಚಿಕೆಗಳನ್ನು ಸದಸ್ಯರೆಲ್ಲರಿಗೂ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದರು.

ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿ.ಎ.ಕುಂಬಾರ ಶಿಕ್ಷಕರನ್ನು ಅಭಿನಂದಿಸಲಾಯಿತು. ಡಾ.ಆರ್.ಕೆ. ಗಚ್ಚಿನಮಠ ಮಾತನಾಡಿದರು. ಅಗಲಿದ ಸಾಹಿತಿ ಗುರುಲಿಂಗ ಕಾಪಸೆಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೋಶಾಧ್ಯಕ್ಷ ಶಿವಯೋಗಿ ಜಕ್ಕಲಿ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ನಿವೃತ್ತ ಸೈನಿಕ ಶಿವಪುತ್ರಪ್ಪ ಸಂಗನಾಳ, ಶಿಕ್ಷಕ ವಿ.ಎ. ಕುಂಬಾರ, ಎಂ.ಕೆ. ಬೇವಿನಕಟ್ಟಿ, ಸಿ.ಕೆ. ಕೇಸರಿ, ಜೆ.ಎ. ಪಾಟೀಲ, ಶಿಕ್ಷಕ ಬಿ.ಟಿ. ತಾಳಿ, ಎಚ್.ವೀ. ಈಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT