ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ಸಾಹಿತ್ಯದ ಮೂಲ ಜನಪದ’

Last Updated 1 ಸೆಪ್ಟೆಂಬರ್ 2017, 5:00 IST
ಅಕ್ಷರ ಗಾತ್ರ

ಗದಗ: ‘ಜನಪದ ಸಾಹಿತ್ಯ ಆಕಾಶದಷ್ಟು ವಿಶಾಲ ಹಾಗೂ ಸಾಗರದಷ್ಟು ಆಳವಾ ಗಿದೆ. ಅದರಲ್ಲಿ ಬರುವ ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನಗೀತೆ ಸೇರಿ ವಿಶ್ವ ಸಾಹಿತ್ಯದ ಮೂಲವನ್ನೆಲ್ಲ ಜನಪದ ದಲ್ಲಿ ಕಾಣಬಹುದು’ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾ ಪಕ ಕರಿಯಪ್ಪ ಕೊಡವಳ್ಳಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಎಂ.ಬಿ.ಹುಯಿಲ ಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಹರಿದಾಸಭಟ್ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜಾನಪದ ಹಾಡುಗಳು ಶ್ರಮ ಸಂಸ್ಕೃತಿ ಪ್ರತೀಕವಾಗಿವೆ. ಗದಗ ಜಿಲ್ಲೆಯ ಪರಿಸರದ ಜನಪದರು ಲಯವಾಗಿ ಈ ಪದಗಳನ್ನು ಹಾಡುವುದು ವಿಶೇಷ’ ಎಂದರು.

ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಅವರು ಅಧ್ಯಕ್ಷತೆ ವಹಿಸಿದ್ದರು. ‘ಬಾಲ್ಯದಲ್ಲಿ ಕೇಳು ತ್ತಿದ್ದ ಗೀಗಿ ಪದಗಳು, ರಿವಾಯತ್ ಪದಗಳು, ಸೋಬಾನೆ ಪದಗಳು ಇಂದು ಕಿವಿಗೆ ಬೀಳುತ್ತಿಲ್ಲ. ಬದಲಿಗೆ ಚಲನಚಿತ್ರ ಗೀತೆಗಳು ಕಿವಿಗೆ ಅಪ್ಪಳಿಸುತ್ತಿವೆ. ಜನಪದ ಸಾಹಿತ್ಯ ಅಳಿವಿನ ಅಂಚಿಗೆ ಬಂದು ನಿಂತಿದೆ’ ಎಂದು ವಿಷಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಶಿವಾನಂದ ಗಿಡ್ನಂದಿ ಸ್ವಾಗತಿ ಸಿದರು. ‘20ನೇ ಶತಮಾನದಲ್ಲಿ ಕರ್ನಾ ಟಕ ಕಂಡ ಅಪರೂಪದ ವಿದ್ವಾಂಸರಲ್ಲಿ ಪ್ರೊ.ಕು.ಶಿ.ಹರಿದಾಸಭಟ್ಟರು ಪ್ರಮುಖರು, ಸಾಹಿತಿ, ಅಂಕಣಕಾರ, ಜನಪದ ವಿದ್ವಾಂಸ, ಶಿಕ್ಷಣ ತಜ್ಞ, ಸಾಂಸ್ಕತಿಕ ಹರಿಕಾರ, ವಿಮರ್ಶಕ ಹೀಗೆ ಹಲವು ವಿಶೇಷಣಗಳಿಂದ ಅವರನ್ನು ಗುರುತಿಸಬಹುದು. 50 ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಅವರು, ‘ಲೋಕಾಭಿರಾಮ’ದ ಅಂಕಣಕಾರರಾಗಿ ಜನಪ್ರಿಯತೆ ಗಳಿಸಿ ದ್ದರು’ ಎಂದು ಸ್ಮರಿಸಿದರು. 

ಗದಗ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಐ.ಆರ್.ಅಕ್ಕಿ ಮಾತ ನಾಡಿ, ‘ಜನಪದ ಸಾಹಿತ್ಯ ಬಂಗಾರ ಇದ್ದಂತೆ. ಅದರಲ್ಲಿರುವ ಸತ್ವ ತತ್ವಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು, ಗ್ರಾಮೀಣ ಭಾಗದಲ್ಲಿ ಸಂಪನ್ನವಾಗಿರುವ ಜನಪದ ಸಾಹಿತ್ಯವನ್ನು ಹೊಸ ತಲೆ ಮಾರು ಸ್ವೀಕರಿಸಿ, ಬೆಳೆಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಜಯದೇವ ಭಟ್, ಅನಂತ ಭಟ್, ಪ್ರಾಚಾರ್ಯ  ವಿ.ಪಿ.ಪಾಟೀಲ, ಗಂಗಾ ಪವಾರ, ಬಾಹುಬಲಿ ಜೈನರ್, ದತ್ತ ಪ್ರಸನ್ನ ಪಾಟೀಲ ಇದ್ದರು. ಮೀನಾಕ್ಷಿ ಯಳವತ್ತಿ ನಿರೂಪಿಸಿದರು. ಬಸವರಾಜ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT