ಮಂಗಳವಾರ, ನವೆಂಬರ್ 19, 2019
23 °C

ಪ್ರೆಸ್‌ಟ್ರಸ್ಟ್: ಮಹಾತ್ಮ ಗಾಂಧಿ 150ನೇ ಜನ್ಮೋತ್ಸವ ನಾಳೆ

Published:
Updated:

ಶಿವಮೊಗ್ಗ: ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಹಯೋಗದಲ್ಲಿ ಅ.20ರಂದು ಬೆಳಿಗ್ಗೆ 10.30ಕ್ಕೆ `ಮಹಾತ್ಮ ಗಾಂಧಿ 150ನೇ ಜನ್ಮೋತ್ಸವ' ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಎಂ.ಚಂದ್ರಶೇಖರ್ ಪ್ರತಿಷ್ಠಾನದ ಎಂ.ಸಿ.ನರೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಪ್ರತಿಷ್ಠಾನದ ಟ್ರಸ್ಟಿ  ಜಿ.ಬಿ.ಶಿವರಾಜು ಆಶಯ ನುಡಿ ಆಡುವರು. ತುಮಕೂರು ವಿಶ್ವ ವಿದ್ಯಾಲಯದ ಡಿವಿಜಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ನಿತ್ಯಾನಂದ ಶೆಟ್ಟಿ ವಿಚಾರವಾದಿ ಡಿ.ಎಸ್.ನಾಗಭೂಷಣ್‌ ಅವರ `ಗಾಂಧಿ ಕಥನ' ಅವಲೋಕನ ನಡೆಸಿಕೊಡುವರು. ಟಿ.ಎಲ್.ರೇಖಾಂಬಾ, ಟಿ.ಅವಿನಾಶ್, ಎಂ.ಚಂದ್ರಶೇಖರಯ್ಯ ಪ್ರತಿಕ್ರಿಯೆ ನೀಡುವರು.

ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸುವರು. ನಂತರ `ಗಾಂಧಿ ಕಥನ' ಕೃತಿಯ ಲೇಖಕ ಡಿ.ಎಸ್. ನಾಗಭೂಷಣ ಅವರೊಂದಿಗೆ ಸಂವಾದ ನಡೆಯಲಿದೆ. ಗಾಂಧಿ ಸಂಬಂಧಿ ಕೃತಿಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)