ವೀರಾಂಜನೇಯ ಸ್ವಾಮಿ ದೇವಳದಲ್ಲಿ ಹನುಮಜಯಂತಿ

7

ವೀರಾಂಜನೇಯ ಸ್ವಾಮಿ ದೇವಳದಲ್ಲಿ ಹನುಮಜಯಂತಿ

Published:
Updated:

ಮಾಗಡಿ: ಸಾತನೂರಿನ ಚಕ್ರಧಾರಿ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ 4ನೇ ಹನುಮ ಜಯಂತಿ ಅಂಗವಾಗಿ ಡಿ.20ರ ಬೆಳಿಗ್ಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ಪಂಚಫಲಗಳ ಅಲಂಕಾರ ಮಾಡಲಾಗುವುದು ಎಂದು ದೇವಾಲಯದ ವ್ಯವಸ್ಥಾಪಕರಾದ ಶಿವರತ್ನಮ್ಮ ಗಿರಿಯಪ್ಪ ತಿಳಿಸಿದರು.

ಡಿ.21ರಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ ಹಾಗೂ ಪವಮಾನ ಹೋಮ ನಡೆಯಲಿದೆ. 2 ದಿನವೂ ಸಾಮೂಹಿಕ ಅನ್ನದಾನ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರಿಯಪ್ಪ, ಮಾ.ರಂಗಸ್ವಾಮಿ, ಪಟೇಲ್‌ ಗಂಗಾಧರಯ್ಯ, ರೇವಣ್ಣಪ್ಪ, ಮಂಜು, ಡಿ.ಎಸ್‌.ಗಿರಿಯಪ್ಪ, ಬೆಟ್ಟಸ್ವಾಮಿ ಹಾಗೂ ಗ್ರಾಮಸ್ಥರು ಭಾಗವಹಿಸಲಿದ್ದಾರೆ. ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಹನುಮ ಜಯಂತಿ: ಕಲ್ಲೂರು, ಶ್ರೀಗಿರಿಪುರ, ಕಲ್ಯಾ, ಅಗಲಕೋಟೆ, ಕೊಟ್ಟಗಾರಹಳ್ಳಿ, ಬಾಣವಾಡಿ, ತಿಪ್ಪಸಂದ್ರ, ಸೋಲೂರು, ಕುದೂರು, ಪಟ್ಟಣದ ಸೀತಾರಾಮಾಂಜನೇಯ ಸ್ವಾಮಿ ದೇವಾಲಯಗಳಲ್ಲಿ ಡಿ.20ರಂದು ಹನುಮ ಜಯಂತಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !