ಹೊಳೆನರಸೀಪುರ: ‘ಬೆಂಬಲ ಬೆಲೆ ಘೋಷಿಸದೆ, ನಷ್ಟ ಉಂಟಾದಾಗ ಪರಿಹಾರ ನೀಡದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಲ್ಲಿ ಖಾಲಿ ಇರುವ ಶೇ 60 ಹುದ್ದೆಗಳನ್ನು ಸಿಬ್ಬಂದಿ ನೇಮಿಸದೆ ರೈತರಿಗೆ ತೀವ್ರ ತೊಂದರೆ ಆಗುತ್ತಿದೆ. ಗೊತ್ತಿದ್ದರೂ ಕ್ರಮ ತೆಗೆದುಕೊಳ್ಳದೆ ನಾವು ರೈತರ ಪರವಾಗಿಲ್ಲ ಎಂಬುದನ್ನು ಸರ್ಕಾರ ಸಾಬೀತು ಪಡಿಸಿದೆ’ ಎಂದು ಶಾಸಕ ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ಇಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ದಿವಂಗತ ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ಯೋಜನೆಗಳಿಂದ ದೇಶದ ಲಕ್ಷಾಂತರ ರೈತರಿಗೆ ಉಪಯೋಗವಾಗಿದೆ. ಅವರ ಜನ್ಮದಿನದ ಅಂಗವಾಗಿ ರೈತ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ವಿವರಿಸಿದರು. ನಾನು ಕೆಎಂಎಫ್ ಅಧ್ಯಕ್ಷನಾಗಿದ್ದಾಗ ರೈತರಿಂದ ಜೋಳವನ್ನು ನೇರವಾಗಿ ಖರೀದಿ ಮಾಡುತ್ತಿದ್ದೆ, ಹೈನುಗಾರಿಕೆಗೆ ಹೆಚ್ಚು ಉತ್ತೇಜನ ನೀಡಿದ್ದೆ. ಈಗ ಕೆಎಂಎಫ್ ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.

ಸಭೆಯಲ್ಲಿದ್ದ ರೈತರೊಬ್ಬರು ‘ಸರ್ಕಾರ ನಮ್ಮಿಂದ ಕಪ್ಪು ರಾಗಿ ಖರೀದಿ ಮಾಡಲ್ಲ. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಕಪ್ಪುರಾಗಿ ಕೊಡುತ್ತಾರೆ. ಎಲ್ಲಿಂದ ಬರುತ್ತಿದೆ ಎಂದು ಶಾಸಕರನ್ನು ಪ್ರಶ್ನಿಸಿದರು. ನೀವು ಈ ಬಗ್ಗೆ ಸರ್ಕಾರವನ್ನೇ ಕೇಳಬೇಕು ಎಂದು ಹೇಳಿದ ಶಾಸಕರು, ರೈತರಿಂದ ಕಪ್ಪು ರಾಗಿ ಖರೀದಿಗೆ ಅಗತ್ಯ ಕ್ರಮವಹಿಸಿ ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಸೂಚಿಸಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗೇಶ್ರಾವ್ ತೋಟಗಾರಿಕೆ ಬೆಳೆಗಳಾದ ತೆಂಗು, ಬಾಳೆ, ಅಡಿಕೆ, ತಾಳೆ ಬೆಳೆ, ಸೌಲಭ್ಯಗಳ ಬಗ್ಗೆ ವಿವರಿಸಿ ವಿವರಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನಾ ಪ್ರಸ್ತಾವಿಕ ಮಾತನಾಡಿದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಮೀನು ಸಾಕಣೆ, ಮಹೇಶ್ ಕುಮಾರ್ ರೇಷ್ಮೆ ಕೃಷಿ ಕುರಿತು ವಿವರಿಸಿದರು.
ಪಡುವಲಹಿಪ್ಪೆಯ ಗುರುರಾಜ್, ಕೋಡಿಹಳ್ಳಿಯ ಕುಮಾರ್, ಬನಕುಪ್ಪೆಯ ರೇವಣ್ಣ, ಉದ್ದೂರುಹೊಸಳ್ಳಿಯ ಅಣ್ಣಾಜಪ್ಪ, ಶಂಕರಶೆಟ್ಟಿಹಳ್ಳಿಯ ಪುಟ್ಟತಾಯಿ ಅವರಿಗೆ ಶಾಸಕ ರೇವಣ್ಣ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು. ಕೃಷಿ ಕ್ಷೇತ್ರದ ಸಾಧನೆಗಾಗಿ ಬೋರೇಗೌಡ, ಮಾದೇಗೌಡ, ಕೆ.ಬಸವರಾಜಪ್ಪ, ಕುಮಾರಸ್ವಾಮಿ, ರವಿ ಅವರನ್ನೂ ಸನ್ಮಾನಿಸಿದರು. ಚಿಟ್ಟನಹಳ್ಳಿಯ ಅನ್ನಪೂರ್ಣೇಶ್ವರಿ ಆಹಾರ ಭದ್ರತಾ ಗುಂಪಿಗೆ ₹25 ಸಾವಿರ ಪ್ರೋತ್ಸಾಹ ಧನ ನೀಡಿದರು. ಜಿಲ್ಲೆಯ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರಾಮೇನಹಳ್ಳಿಯ ಪುಟ್ಟಸ್ವಾಮಿ ಅವರನ್ನು ಗೌರವಿಸಿದರು.

ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ತಿಪ್ಪೇಸ್ವಾಮಿ, ರೈತ ಸಂಘದ ಅಧ್ಯಕ್ಷ ಸೋಮಶೇಖರ್, ಕೃಷಿಕ ಸಮಾಜದ ಅಧ್ಯಕ್ಷ ಹೊಯ್ಸಳ ಎಸ್. ಅಪ್ಪಾಜಿ,
ಕೃಷಿ ಇಲಾಖೆ ಅಧಿಕಾರಿ ರಾಹುಲ್ , ಹೇಮಾವತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.