ಹಾಸನದಲ್ಲಿ ಸಿರಿಧಾನ್ಯ ಮೇಳ | ರೈತರಿಗೆ ತಾಂತ್ರಿಕ ಜ್ಞಾನ; ಹೊಸ ತಳಿ ಪರಿಚಯ
ಜಿಲ್ಲಾ ಕೇಂದ್ರದಲ್ಲಿ ಪ್ರಥಮ ಬಾರಿಗೆ ಆಲೂಗಡ್ಡೆ, ಸಿರಿಧಾನ್ಯ ಮೇಳ: ಜಿಲ್ಲೆ, ನೆರೆಯ ಜಿಲ್ಲೆಗಳಿಂದ ನೂರಾರು ಕೃಷಿಕರು ಭಾಗಿ
ಸಂತೋಷ್ ಸಿ.ಬಿ.
Published : 28 ಜನವರಿ 2026, 7:04 IST
Last Updated : 28 ಜನವರಿ 2026, 7:04 IST
ಫಾಲೋ ಮಾಡಿ
Comments
ವಿವಿಧ ತಳಿಯ ಆಲೂಗಡ್ಡೆ ಅಂಗಾಂಶ ಕೃಷಿಯ ಸಸಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ಮೇಳದಲ್ಲಿದ್ದ ಜನರು.
ಸುರೇಶ್
ಶಂಕರ್
ಎಚ್.ಆರ್. ಯೋಗೇಶ್
ರಮೇಶ್‌ಕುಮಾರ್
25 ವರ್ಷಗಳಿಂದ ಆಲೂಗಡ್ಡೆ ಕೃಷಿ ಮಾಡುತ್ತಿದ್ದು. ಕೆಲವೊಮ್ಮೆ ಇಳುವರಿ ಕಡಿಮೆಯಾದರೂ ಪ್ರತಿವರ್ಷ ಆಲೂಗಡ್ಡೆ ಬೆಳೆಯುತ್ತಿದ್ದೇವೆ. ಈ ಮೇಳದಿಂದ ಔಷಧೋಪಚಾರ ಗೊಬ್ಬರಗಳ ಬಗ್ಗೆ ಉಪಯುಕ್ತ ಮಾಹಿತಿ ದೊರೆಯಿತು
ಸುರೇಶ್ ಬಿಟ್ಟಹಳ್ಳಿ ರೈತ
20 ವರ್ಷಗಳಿಂದ ಚಿಪ್ಸ್ ತಯಾರಿಕೆಗೆ ಬಳಸುವ ವಿಶೇಷ ಎಫ್‌ಸಿ–5 ಮತ್ತು ಎಫ್‌ಸಿ–12 ತಳಿಗಳ ಆಲೂಗಡ್ಡೆ ಬೆಳೆಯುತ್ತಿದ್ದೇನೆ. ಕಳೆದ ವರ್ಷ ಎಂಟು ಎಕರೆಯಲ್ಲಿ ಎಕರೆಗೆ ಸುಮಾರು 100 ಚೀಲ ಇಳುವರಿ ದೊರೆತಿದೆ
ಶಂಕರ್ ಅಪ್ಪೆನಹಳ್ಳಿ ಆಲೂಗಡ್ಡೆ ಬೆಳೆಗಾರ
ಮೊದಲ ಬಾರಿಗೆ ಆಲೂಗಡ್ಡೆ ಮತ್ತು ಸಿರಿಧಾನ್ಯ ಮೇಳ ಒಟ್ಟಿಗೆ ಆಯೋಜಿಸಲಾಗಿದ್ದು ರೈತರಿಗೆ ಪೂರಕ ಮಾಹಿತಿ ಒದಗಿಸಲಾಗಿದೆ. ಇತರೆ ರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳಿಂದ ಆಲೂಗಡ್ಡೆ ಕೃಷಿಯ ಕುರಿತು ಮಾಹಿತಿ ನೀಡಲಾಯಿತು
ಯೋಗೇಶ್ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ
ಈ ಬಾರಿಯ ಮೇಳದಲ್ಲಿ ಸಿರಿಧಾನ್ಯಗಳ ಮಾಹಿತಿ ನೀಡಲಾಗಿದೆ. ವಿಶೇಷವಾಗಿ ಸಿರಿಧಾನ್ಯಗಳಿಂದ ತಯಾರಿಸಬಹುದಾದ ಖಾದ್ಯಗಳ ಪಾಕ ಸ್ಪರ್ಧೆ ಮೂಲಕ ಸಿರಿಧಾನ್ಯದ ರುಚಿ ಮಹತ್ವವನ್ನು ಜನರಿಗೆ ಪರಿಚಯಿಸಲಾಗಿದೆ