ಹಾಸನ ಎಸ್‌ಪಿ ರಾಹುಲ್ ಕುಮಾರ್ ವರ್ಗ

7

ಹಾಸನ ಎಸ್‌ಪಿ ರಾಹುಲ್ ಕುಮಾರ್ ವರ್ಗ

Published:
Updated:
Deccan Herald

ಹಾಸನ: ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಬಿಬಿಎಂಪಿ ಜಾಗೃತ ದಳ ನಿರ್ದೇಶಕರಾಗಿದ್ದ ಪ್ರಕಾಶ್ ಗೌಡ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮಂಡ್ಯ ಜಿಲ್ಲೆ ಮದ್ದೂರಿನ ಪ್ರಕಾಶ್ ಅವರು, ಈ ಹಿಂದೆ ಮೈಸೂರಿನಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿಂದ ಎಸ್ಪಿ ಹುದ್ದೆಗೆ ಬಡ್ತಿ ಪಡೆದು ಬಿಬಿಎಂಪಿ ಜಾಗೃತ ದಳ ನಿರ್ದೇಶಕ ಹುದ್ದೆಗೆ ವರ್ಗವಾಗಿದ್ದರು. ರಾಹುಲ್ ಕುಮಾರ್ ಗೆ ಸ್ಥಳ ತೋರಿಸಿಲ್ಲ.

ಹೇಮಾವತಿ ಯೋಜನೆ ವಿಶೇಷ ಭೂ ಸ್ವಾದೀನಾಧಿಕಾರಿಯಾಗಿದ್ದ ಬಿ.ಎ.ಜಗದೀಶ್ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಲಾಗಿದೆ.

ಹಾಸನದಲ್ಲಿ ಕಚೇರಿ ಹೊಂದಿರುವ ಎತ್ತಿನಹೊಳೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗೆ ಮೈಸೂರು ಮಹಾ ನಗರ ಪಾಲಿಕೆಯಲ್ಲಿ ವಲಯ ಮುಖ್ಯಾಧಿಕಾರಿಯಾಗಿದ್ದ ಬಿ.ಎನ್.ವೀಣಾ ಅವರನ್ನು ವರ್ಗಾಯಿಸಲಾಗಿದೆ .

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !