ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವಗಲ್‌: ಮಗುಚಿ ಬಿದ್ದ ಕಾರ್ಬನ್ ಆಯಿಲ್ ಟ್ಯಾಂಕರ್

Published 27 ಮಾರ್ಚ್ 2024, 14:08 IST
Last Updated 27 ಮಾರ್ಚ್ 2024, 14:08 IST
ಅಕ್ಷರ ಗಾತ್ರ

ಜಾವಗಲ್‌: ಗ್ರಾಮದ ಕೆರೆ ಏರಿ ತಿರುವಿನಲ್ಲಿ ಕಾರ್ಬನ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಬುಧವಾರ ಮಗುಚಿ ಬಿತ್ತು.

ಮಂಗಳೂರು ಕಡೆಯಿಂದ ಜಾವಗಲ್ ಮಾರ್ಗವಾಗಿ ಬಳ್ಳಾರಿಗೆ ಹೋಗುತ್ತಿದ್ದ ಮಹಾರಾಷ್ಟ್ರ ಮೂಲದ ಆಯಿಲ್ ಟ್ಯಾಂಕರ್ ಕೆರೆ ಏರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

‘ಈ ಸ್ಥಳದಲ್ಲಿ ಹಲವಾರು ವಾಹನಗಳು ಪದೇ ಪದೇ ಅಪಘಾತಕ್ಕೀಡಾಗುತ್ತಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೆರೆ ಏರಿ ತಿರುವಿನಲ್ಲಿ ಅಪಘಾತ ವಲಯವೆಂದು ಸೂಚನಾ ಫಲಕ ಅಳವಡಿಸಬೇಕು. ಕೆರೆ ಏರಿ ಸುತ್ತಲೂ ಅಳವಡಿಸಿರುವ ತಡೆಗೋಡೆಯನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT