ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು | ಸಾಕು ನಾಯಿ ಹೊತ್ತೊಯ್ದ ಚಿರತೆ: ಆತಂಕ

Published 11 ಮೇ 2024, 13:18 IST
Last Updated 11 ಮೇ 2024, 13:18 IST
ಅಕ್ಷರ ಗಾತ್ರ

ಆಲೂರು: ರಾತ್ರಿ ವೇಳೆ ತೋಟದ ಮನೆಗೆ ನುಗ್ಗಿ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿರುವ ಘಟನೆ ಕೆ.ಹೊಸಕೋಟೆ ಹೊಬಳಿ ಕಾಡ್ಲೂರು ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ 12.30 ರ ಸಮಯದಲ್ಲಿ  ಕಾಡ್ಲೂರು ಗ್ರಾಮದ ಕೆ.ಬಿ.ಕುಮಾರ್ ಎಂಬುವವರ ಕಾಫಿ ತೋಟದ ಮನೆ ಮುಂಭಾಗ ಮಲಗಿದ್ದ ಸಾಕು ನಾಯಿಯೊಂದನ್ನು ಎಳೆದೊಯ್ದ ಚಿರತೆ, ಸಮೀಪದ ಕಾಫಿ ತೋಟದೊಳಗೆ ಎಳೆದೊಯ್ದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದ ಕೆ.ಹೊಸಕೋಟೆ ಭಾಗದ ಜನರು ಭಯಭೀತರಾಗಿದ್ದಾರೆ.

3–4 ವರ್ಷಗಳಿಂದ ಕಾಡಾನೆ ಉಪಟಳ ಈ ಭಾಗದಲ್ಲಿ ಹೆಚ್ಚಿದ್ದು, ಜನರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಹಿಂಪಡೆಯದೇ ನಷ್ಟ ಹೊಂದಿದ್ದು, ತಮ್ಮ ಜಮೀನನ್ನು ಪಾಳು ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಡಾನೆ ಉಪಟಳದ ಜೊತೆಗೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನಸಾಮಾನ್ಯರ ನಿದ್ದೆಗಡಿಸಿದೆ.

ತಾಲ್ಲೂಕಿನಲ್ಲಿ ಎರಡು ತಿಂಗಳಲ್ಲಿ ಎರಡು ಚಿರತೆಗಳು ಉರುಳುಗಳಿಗೆ ಸಿಲುಕಿದ್ದು, ಒಂದು ಚಿರತೆ ಮೃತಪಟ್ಟರೆ, ಇನ್ನೊಂದು ಚಿರತೆಯನ್ನು ಜೀವಂತ ಹಿಡಿದು ಸ್ಥಳಾಂತರ ಮಾಡಲಾಗಿದೆ.

ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಇರುವ ಪ್ರದೇಶವನ್ನು ಗುರುತಿಸಿ, ಆ ಪ್ರದೇಶಗಳಿಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ, ಜನ– ಜಾನುವಾರುಗಳ ಜೀವದ ರಕ್ಷಣೆಗೆ ಮುಂದಾಗಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT