ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಕ್ಕಾಗಿ ಮಾನಸಿಕ ಅಸ್ವಸ್ಥೆ ಅರೆಬೆತ್ತಲೆ ಹೋರಾಟ

ಮೂರು ಬಸ್‌ಗಳ ಗಾಜು ಜಖಂ
Last Updated 20 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾಧಿಕಾರಿ ಕಚೇರಿ ಎದುರಿನ ಬಿ.ಎಂ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ರಂಪಾಟ ಮಾಡಿದ್ದಲ್ಲದೇ, ಬಸ್ ವೈಪರ್‌ ಬಿಚ್ಚಿ ಮೂರು ಸಾರಿಗೆ ಬಸ್ ಗಳ ಗಾಜುಗಳನ್ನು ಜಖಂ ಮಾಡಿದ್ದಾರೆ.

ಅರ್ಧ ತಾಸು ಯಾರ ಮಾತನ್ನೂ ಕೇಳದೆ ಅರೆಬೆತ್ತಲೆ ಹೋರಾಟ ಮಾಡಿದ ಸಕಲೇಶಪುರ ತಾಲ್ಲೂಕಿನ ನಡನಹಳ್ಳಿ ನಿವಾಸಿ ಪ್ರಮೀಳಾ, ‘ತನಗೆ ನಾಲ್ವರು ಪುರುಷರಿಂದ ಅನ್ಯಾಯವಾಗಿದೆ. ಯಾರಿಂದಲೂ ನ್ಯಾಯ ಸಿಕ್ಕಿಲ್ಲ’ ಎಂದು ನಡುರಸ್ತೆಯಲ್ಲೇ ನಿಂತು ಜನರತ್ತ ಕಲ್ಲು ಹಾಗೂ ತೆಂಗಿನ ಕಾಯಿ ತೂರಿ ಆಕ್ರೋಶ ಹೊರ ಹಾಕಿದರು. ನ್ಯಾಯ ಕೊಡಿಸುವಂತೆ ಕುಮಾರಸ್ವಾಮಿಗೆ ಮನವಿ ಮಾಡಿದರು.
‘ನನ್ನ ಅಳಲು ಹೇಳಿಕೊಂಡರೆ ಹುಚ್ಚಿ, ತಲೆ ಕೆಟ್ಟಿದೆ ಎನ್ನುತ್ತಾರೆ. ಆದರೆ ನನಗೆ ಯಾರು ನ್ಯಾಯ ಕೊಡಿಸುತ್ತಾರೆ?, ಎಂದೆಲ್ಲಾ ಪ್ರಶ್ನೆ ಮಾಡಿ ರಸ್ತೆ ಮೇಲೆಲ್ಲಾ ಹೊರಳಾಡಿದರು. ಕೊನೆಗೆ ಮಹಿಳಾ ಪೊಲೀಸರು ಆಕೆಯನ್ನು ಬಲವಂತವಾಗಿ ಆಟೊದಲ್ಲಿ ಠಾಣೆಗೆ ಕರೆದುಕೊಂಡು ಹೋದರು.

‘ತನಗೆ ಹಾಗೂ ತನ್ನ ಕುಟುಂಬಕ್ಕೆ ಅನ್ಯಾಯವಾಗಿದೆ. ಮಧ್ಯರಾತ್ರಿಯಲ್ಲಿ ನನ್ನನ್ನು ಅವಮಾನಿಸಿದ್ದಾರೆ. ನನ್ನ ತಾಯಿಯನ್ನು ಕೊಚ್ಚಿ ಕೊಲೆ ಮಾಡಿದರು. ತಂದೆ ಅಂಗವಿಕಲರು. ಸಮಸ್ಯೆಗೆ ಪರಿಹಾರ ಕೊಡಿಸುವಂತೆ ಅನೇಕ ಕಡೆ ಓಡಾಡಿದ್ದೇನೆ. ಯಾವುದೇ ರೀತಿ ನ್ಯಾಯ ಸಿಕ್ಕಿಲ್ಲ’ ಎಂದು ಎರಡು ಪುಟದ ಪತ್ರ ಬರೆದುಕೊಂಡು ಜಿಲ್ಲಾಧಿಕಾರಿಗೆ ಕಚೇರಿಗೆ ಬಂದಿದ್ದರು.

ಇವರ ರಂಪಾಟದಿಂದ ಅರ್ಧ ತಾಸು ಸಂಚಾರ ದಟ್ಟಣೆಯಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು. ಕೆಲವರು ಈ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುವುದರಲ್ಲಿ ಮಗ್ನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT