ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರ ಪ್ರತಿಭಟನೆ

Last Updated 8 ಡಿಸೆಂಬರ್ 2022, 5:00 IST
ಅಕ್ಷರ ಗಾತ್ರ

ಹಾಸನ: ಪೌರ ಕಾರ್ಮಿಕರು ಮತ್ತು ನೀರು ಸರಬರಾಜು ನೌಕರರ ಕುಂದುಕೊರತೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ನಗರಸಭೆಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರು ಮತ್ತು ಯುಜಿಡಿ ನೌಕರರು, ಆಟೋ ಚಾಲಕರು, ಲೋಡರ್, ಹೆಲ್ಪರ್ ಹಾಗೂ ಹೊರಗುತ್ತಿಗೆಯ ಇತರೆ ನೌಕರರು 15 ವರ್ಷಗಳಿಂದಲೂ ಒಂದೇ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಗುತ್ತಿಗೆದಾರರು ಪಿಎಫ್, ಇಎಸ್‌ಐ ಹಣವನ್ನು ಕಡಿತಗೊಳಿಸಿ ₹ 11,980 ವೇತನ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಈ ನೌಕರರಿಗೆ ಸರ್ಕಾರದ ಆದೇಶದನ್ವಯ ಸೂಕ್ತ ಸೇವಾ ಭದ್ರತೆ. ಸಮವಸ್ತ್ರ, ಗುರುತಿನ ಚೀಟಿ, ಗಮ್ ಶೂ, ಹ್ಯಾಂಡ್ ಗ್ಲೌಸ್, ಟಾರ್ಚ್, ನೀರು ಸರಬರಾಜಿಗೆ ಸಂಬಂಧಪಟ್ಟ ಸಾಮಗ್ರಿಗಳನ್ನು ನೀಡಿಲ್ಲ. ವಾಟರ್ ಮೆನ್, ಯುಜಿಡಿ ನೌಕರರು, ಆಟೋ ಚಾಲಕರು, ಹೆಲ್ಲರ್, ಲೋಡರ್, ಹೊರಗುತ್ತಿಗೆ ಇತರೆ ನೌಕರರಿಗೆ ಮೂರು ತಿಂಗಳು ವಿಳಂಬವಾಗಿ ಸಂಬಳ ನೀಡಲಾಗುತ್ತಿದೆ ಎಂದು ದೂರಿದರು.

ಈ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಸಂಬಳ ಹಾಗೂ ಸೇವಾ ಭದ್ರತೆ ಕುರಿತು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ಯೋಗೀಶ್, ಲೋಕೇಶ್, ರಮೇಶ್, ಎಚ್.ಜಿ. ರಾಮು, ಎನ್.ಆರ್. ವೆಂಕಟೇಶ್, ಪರಶು ರಾಮು, ಎ.ಆರ್. ನಾಗರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT